ಹೊನ್ನಾವರ: ಪಟ್ಟಣದ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ. 30ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಉಚಿತ ಕಣ್ಣಿನ (Eye) ಪೊರೆ ತಪಾಸಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ಹೊನ್ನಾವರದ ಲಯನ್ಸ್ ಕ್ಲಬ್, ಕಲಭಾಗಕರ ಕಲ್ಯಾಣ ಕಲ್ಪ ಟ್ರಸ್ಟ್, ಮುಂಬಯಿ ಇವರ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಡಾ. ಮನೋಜ್ ಎಂ.ಎನ್. ಮತ್ತು ಡಾ. ಪೂನಮ್ ಎ.ಜೆ. ಅವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: IPL 2024 : ಲಕ್ನೊ ತಂಡಕ್ಕೆ ರಾಹುಲ್ ದ್ರಾವಿಡ್ ಮೆಂಟರ್?
ಹೆಚ್ಚಿನ ಮಾಹಿತಿಗಾಗಿ ಕಲಭಾಗಕರ ಕಲ್ಯಾಣ ಕಲ್ಪ ಟ್ರಸ್ಟ್‌ನ ವಸಂತ್ ಪ್ರಭು ಮೊ.ಸಂ. 9448321900, ಡಾ.ವಿ.ಸಿ. ಶೆಟ್ಟಿ ಮೊ.ಸಂ. 9448007724, ಮಹಾಬಲೇಶ್ವರ ಜಿ. ನಾಯ್ಕ ಮೊ.ಸಂ. 9480211578, ಮಹೇಶ ನಾಯ್ಕ ಮೊ.ಸಂ. 9449148333 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದೆ.