Site icon Vistara News

Uttara Kannada News: ಹನ್ಸ್‌ ನ್ಯಾಚುರಲ್ಸ್‌ ವೈಪಿಎಲ್ ಸೀಸನ್ 3ಗೆ ಅದ್ಧೂರಿ ತೆರೆ: ಆರ್.ಬಿ. ಟೈಗರ್ಸ್‌ಗೆ ಒಲಿದ ಟ್ರೋಫಿ

RB Tigers won the Hans Naturals YPL season 3 cricket tournament at Yallapur

ಯಲ್ಲಾಪುರ: 15 ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿಯನ್ನು (Cricket Tournament) ಯಶಸ್ವಿಯಾಗಿ ಆಯೋಜಿಸಿರುವುದು ಸುಲಭದ ಮಾತಲ್ಲ. ಮುಂದಿನ ಪೀಳಿಗೆಗೆ ವೇದಿಕೆ ಮಾಡಿಕೊಡುವುದು ಅತ್ಯವಶ್ಯಕ ಎಂದು ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್‌ ಹೇಳಿದರು.

ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಹನ್ಸ್‌ ನ್ಯಾಚುರಲ್ಸ್‌ ವೈಪಿಎಲ್ ಸೀಸನ್ 3ರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡುವಂತಾಗಲಿ ಎಂಬುದು ನಮ್ಮ ಹಾರೈಕೆಯಾಗಿದೆ ಎಂದು ಈ ವೇಳೆ ತಿಳಿಸಿದರು.

ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಗೆಲುವು-ಸೋಲು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸೋಲು ಇದ್ದರೆ ಮಾತ್ರ ಗೆಲುವಿಗೆ ಬೆಲೆ. ಹೀಗಾಗಿ ಎರಡನ್ನೂ ಸಮಾನವಾಗಿ ಸ್ವೀಕರಿಸೋಣ ಎಂದು ಹೇಳಿದರು.

ಇದನ್ನೂ ಓದಿ: Hyundai Creta facelift : ಹೀಗಿದೆ ನೋಡಿ ಎಲ್ಲರ ಅಚ್ಚುಮೆಚ್ಚಿನ ಕ್ರೆಟಾ ಕಾರಿನ ಹೊಸ ವಿನ್ಯಾಸ

ತಾನ್ ಸೇನ್ ಪ್ರಶಸ್ತಿ ಪುರಸ್ಕೃತ ಗಣಪತಿ ಭಟ್ ಹಾಸಣಗಿ ಮಾತನಾಡಿ, ಮನುಷ್ಯನ ಬದುಕಿಗೆ ಕಲೆ ಮತ್ತು ಕ್ರೀಡೆ ಎರಡು ಮಹತ್ವದ್ದಾಗಿದೆ. ದೀರ್ಘ ಕಾಲದ ಪರಿಶ್ರಮ, ಕಲಿಕೆಯ ಮೂಲಕ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಅಂತೆಯೇ ಜನರ ಸಹಕಾರವೂ ಅತ್ಯಗತ್ಯ ಎಂದರು.

ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ಪ್ರಾಯೋಜಕತ್ವದ ಜವಾಬ್ದಾರಿ ಹೊತ್ತ ಹನ್ಸ್ ನ್ಯಾಚುರಲ್ ಮಾಲೀಕ ವಿಶಾಲ ಶ್ಯಾನಭಾಗ್, ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಯುಕೆ ಎಸ್‌.ಆರ್‌. ಆಯಿಲ್‌ನ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಕಾಶಿನಾಥ ಶ್ಯಾನಭಾಗ್‌ ಹಾಗೂ ಗಣಪತಿ ಭಟ್ ಹಾಸಣಗಿ ಅವರನ್ನು ಅಸೋಸಿಯೇಷನ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ವಿಚಾರಕ ಜಗದೀಶ ಹಿರೇಮಠ, ಉದ್ಯಮಿ ಬಾಲು ನಾಯಕ, ಟಿ.ಎಂ.ಎಸ್. ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಯಲ್ಲಾಪುರ ಕ್ರಿಕೆಟ್ ಅಸೋಸಿಯಷನ್ ಸದಸ್ಯ ನಾಗರಾಜ ಮದ್ಗುಣಿ, ಕೃಷ್ಣಾ ನಾಯರ್, ಅಶೋಕ ನಾಯ್ಕ, ಪ್ರಕಾಶ ನಾಯಕ, ಮತ್ತಿತರರು ಉಪಸ್ಥಿತರಿದ್ದರು. ಮಾರುತಿ ನಾಯ್ಕ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ ನಿರೂಪಿಸಿದರು.

ಇದನ್ನೂ ಓದಿ: Dog Love : ಓಡೋಡಿ ಬಂದು ಮೇಕೆ ಮರಿಗೆ ಹಾಲುಣಿಸುವ ಶ್ವಾನ! ಮಾತೃತ್ವಕ್ಕೆ ಮಾರುಹೋದ ಜನ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆರ್.ಬಿ. ಟೈಗರ್ಸ್ ಮತ್ತು ಜಿ.ಕೆ. ವಾರಿಯರ್ಸ್ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಆರ್.ಬಿ. ಟೈಗರ್ಸ್ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ವಿಜೇತ ತಂಡಕ್ಕೆ 1,01,111/- ನಗದು ಬಹುಮಾನ ಹಾಗೂ ರನ್ನರ್‌ ಅಪ್‌ ತಂಡಕ್ಕೆ 75000/- ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು.

Exit mobile version