ಯಲ್ಲಾಪುರ: ಜೇನು ಸಾಕಾಣಿಕೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ, ಬೆಳೆಗಳ (Crop) ಇಳುವರಿಯನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಜೇನು ಕೃಷಿ ತಜ್ಞ ಹಾಗೂ ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಗಣಪತಿ ನಾಯ್ಕ ಆನಗೋಡ ಅಭಿಪ್ರಾಯಪಟ್ಟರು.
ತಾಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟವು ಕುಮಟಾದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕೃಷಿ ಸಾಂಸ್ಥಿಕ ತರಬೇತಿಯಲ್ಲಿ ಜೇನು ಕೃಷಿ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಜೇನು ನಮ್ಮ ಬದುಕಿನ ಪರಿಸರದ ನಿತ್ಯ ಜೀವನದಲ್ಲಿ ಜೀವಿಸುವುದರಿಂದ ಸುತ್ತಮುತ್ತಲು ಉತ್ತಮ ಫಸಲು ಕಾಣಲು ಸಾಧ್ಯ. ಮಹಿಳೆಯರು ತಮ್ಮ ಕೆಲಸದಲ್ಲಿ ಏಕಾಗ್ರತೆಯ ಸಾಧಿಸುವುದರಿಂದ ಜೇನು ಸಾಕಾಣಿಕೆಯಲ್ಲಿ ಉತ್ತಮ ಫಲ ಕಾಣಲು ಸಾಧ್ಯ ಎಂದರು.
ಪಶು ಪರಿವೀಕ್ಷಕ ಕೆ. ಜಿ. ಹೆಗಡೆ ಮಾತನಾಡಿದರು.
ಇದನ್ನೂ ಓದಿ: ಕನ್ನಡದ ಸಂಗೀತಗಾರ್ತಿ ಡಾ.ಜ್ಯೋತ್ಸ್ನಾ ಶ್ರೀಕಾಂತ್‌ಗೆ ಬ್ರಿಟನ್‌ನ ಅತ್ಯುನ್ನತ ಪ್ರಶಸ್ತಿ
ಕೃಷಿಕ ಗೋಪಾಲ ಭಟ್ಟ ನಡಿಗೆಮನೆ ತರಬೇತಿಯಲ್ಲಿ ಉಪಸ್ಥಿತರಿದ್ದು ಸಾಂಪ್ರದಾಯಿಕವಾದ ಕೃಷಿ ಪದ್ಧತಿಯಲ್ಲಿ ಬೀಜಾಮೃತ, ಜೀವಾಮೃತ, ರಸ ಗೊಬ್ಬರದ ಬಗೆಗೆ ಮಾಹಿತಿ ನೀಡಿದರು.
ಅನ್ನಪೂರ್ಣ ಭಟ್ಟ ತರಬೇತಿ ಉದ್ಘಾಟಿಸಿದರು. ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಕ್ರಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಕಾಶ, ಸಂಗಮೇಶ ಗುನಗಿ, ಪಿಡಿಒ ಸಂತೋಷಿ ಆರ್ ಬಂಟ್, ಪಂಚಾಯಿತಿ ಸದಸ್ಯೆ ರತ್ನಾ ಬಾಂದೇಕರ್, ವಲಯ ಮೇಲ್ವಿಚಾರಕ ರಾಜಾರಾಮ ವೈದ್ಯ, ಕೆ.ಮೀನಾಕ್ಷಿ, ಕೌಶಲ್ಯ ಸಂಯೋಜಕಿ ಷರೀಫಾ ಮುಲ್ಲಾ ಉಪಸ್ಥಿತರಿದ್ದರು.
ಇದನ್ನೂ ಓದಿ: Bengaluru Film Festival: ಫೆ.29 ರಿಂದ ಮಾ.7 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಶ್ರೀಲತಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೇಮಾವತಿ ಆಚಾರಿ ಸ್ವಾಗತಿಸಿದರು. ಭಾಗೀರಥಿ ಭಟ್ಟ ನಿರೂಪಿಸಿದರು. ರವಿಶಂಕರ ಕೆ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ಗೌಡ ವಂದಿಸಿದರು.