Site icon Vistara News

Uttara Kannada News: ನ.27ರಂದು ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಮಹೋತ್ಸವ

Shree Shejjeshwar Temple at Srikshetra Shejawada in Karwar Taluk

ಕಾರವಾರ: ತಾಲೂಕಿನ ಶ್ರೀಕ್ಷೇತ್ರ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ (Shree Shejjeshwara Temple) ಕಾರ್ತಿಕ ಮಹೋತ್ಸವವು ನ.27 ರಂದು ಗೌರಿ ಹುಣ್ಣಿಮೆಯ ದಿನ ವಿಜೃಂಭಣೆಯಿಂದ ನೆರವೇರಲಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಪಲ್ಲಕ್ಕಿ ಮೆರವಣಿಗೆಯು ನ.27 ರಂದು ಬೆಳಿಗ್ಗೆ 10 ಗಂಟೆಗೆ ದೇವಾಲಯದಿಂದ ಹೊರಟು ವನಕ್ಕೆ ತಲುಪಲಿದೆ. ಬಳಿಕ ಅಲ್ಲಿ ಧಾತ್ರಿ ಹೋಮ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.

ಇದನ್ನೂ ಓದಿ: Anganawadi workers: ಕನಿಷ್ಠ ವೇತನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ಮಧ್ಯಾಹ್ನ 1.30ಕ್ಕೆ ವನಭೋಜನವಿದ್ದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 6 ಗಂಟೆಗೆ ಶ್ರೀ ದೇವರ ಪಲ್ಲಕ್ಕಿಯು ವನದಿಂದ ಹೊರಟು ದಾರಿಯ ಮಧ್ಯ ಮಖೇರಿ ಕ್ರಾಸ್ ಬಳಿ ಪಲ್ಲಕ್ಕಿಯಿಂದ ಇಳಿಸಿ ಲಾಲಕಿಯಲ್ಲಿ ಕುಳ್ಳರಿಸಲಾಗುತ್ತದೆ. ಆ ಬಳಿಕ ಲಾಲಕಿಯಲ್ಲಿ ಮೆರವಣಿಗೆ ಹೊರಟ ಶ್ರೀ ದೇವರ ಉತ್ಸವ ಮೂರ್ತಿಗೆ ಭಕ್ತಾದಿಗಳು ಸೇವೆ ಸಲ್ಲಿಸಲಿದ್ದಾರೆ. ಬಳಿಕ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಹೊರಭಾಗದ ಕಟ್ಟೆಯ ಮೇಲೆ ಲಾಲಕಿಯನ್ನು ಇರಿಸಲಾಗುತ್ತದೆ. ಈ ವೇಳೆ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಆವರಣದಲ್ಲಿ ಆಕರ್ಷಕ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ದೀಪೋತ್ಸವದ ಬಳಿಕ ಲಾಲಕಿ ಮೆರವಣಿಗೆಯು ಮತ್ತೆ ಹೊರಟು ದೇವಸ್ಥಾನದ ಕೆರೆಯ ಬಳಿ ತಲುಪಲಿದೆ.

ಕೆರೆಯಲ್ಲಿ ಶ್ರೀ ದೇವರ ತೆಪ್ಪೋತ್ಸವ ನಡೆಯಲಿದೆ. ಬಳಿಕ ದೇವಸ್ಥಾನಕ್ಕೆ ಮರಳಿ ಮಹಾಪೂಜೆ ನೆರವೇರಿಸುವ ಮೂಲಕ ಕಾರ್ತಿಕೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ಈ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಅಧ್ಯಕ್ಷರು, ಎಲ್ಲ ಸದಸ್ಯರು, ಅರ್ಚಕರು, ವೃತ್ತಿವಾನರು, ದೇವಳಿಯರು ಹಾಗೂ ಊರ ನಾಗರಿಕರು ಕೋರಿದ್ದಾರೆ.

ಇದನ್ನೂ ಓದಿ: IFFI Goa 2023: ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಜಯ್‍ ರಾಘವೇಂದ್ರ ಸಿನಿಮಾ ಆಯ್ಕೆ

ನ.26ರಂದು ತುಲಾಭಾರ ಸೇವೆ

ಕಾರ್ತಿಕೋತ್ಸವದ ನಿಮಿತ್ತ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಲು ಅವಕಾಶವಿರುತ್ತದೆ. ನ.26ರಂದು ತುಲಾಭಾರ ಸೇವಾ ಕಾರ್ಯಕ್ರಮ ನಡೆಯಲಿದ್ದು ಸೇವೆ ಸಲ್ಲಿಸಲು ಇಚ್ಛಿಸುವವರು ನ.24 ರ ರಾತ್ರಿ 8 ಗಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸುವಂತೆ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version