ಯಲ್ಲಾಪುರ: ಎಂ.ಕೆ. ಭಾಸ್ಕರ್ ರಾವ್ ಅವರು ನಿವೃತ್ತಿಯಾದ ನಂತರವೂ ಕಾರ್ಯನಿರತರಾಗಿರುವ ಪತ್ರಕರ್ತರಿಗಿಂತಲೂ ಕ್ರಿಯಾಶೀಲರಾಗಿದ್ದರು. ಸಾವಿನಮನೆ ಕದ ತಟ್ಟುವ ಸಮಯದಲ್ಲೂ ಅವರ ವೃತ್ತಿಪರತೆ ಅಗಾಧವಾಗಿತ್ತು ಎಂದು ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ (Uttara Kannada News) ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಯಲ್ಲಾಪುರ ತಾಲೂಕಿನ ಪತ್ರಿಕಾ ವರದಿಗಾರರು ಗುರುವಾರ ಹಮ್ಮಿಕೊಂಡಿದ್ದ ದಿ. ಎಂ.ಕೆ. ಭಾಸ್ಕರ್ ರಾವ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಶೃದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿ, ಪ್ರಭಾವಿ ಪತ್ರಕರ್ತರಾಗಿದ್ದ ಎಂ.ಕೆ. ಭಾಸ್ಕರ್‌ರಾವ್ ಅವರ ವೃತ್ತಿಜೀವನದ ಬದ್ಧತೆಯನ್ನು ಇಂದಿನ ಪತ್ರಕರ್ತರು ಪಾಲಿಸಿದರೆ ಅದುವೇ ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿ ಎಂದು ತಿಳಿಸಿದರು.
ಭಾಸ್ಕರ್ ರಾವ್ ಅವರು ಕರ್ನಾಟಕದ ರಾಜಕಾರಣ, ಸಾಮಾಜಿಕ ಜನಜೀವನದ ಬಗ್ಗೆ ಪ್ರತಿದಿನ ಅಧ್ಯಯನ ಮಾಡುತ್ತಿದ್ದರು. ಸಮಯದ ಬಗ್ಗೆ ಶ್ರದ್ಧೆ ಹೊಂದಿದ್ದರು, ಯಾವುದೇ ವಿಷಯವನ್ನು ಮಾಹಿತಿ ಪಡೆಯದೇ ಬರೆಯುತ್ತಿರಲಿಲ್ಲ ಎಂದ ಅವರು, ಇತರ ಪತ್ರಕರ್ತರಿಗೆ ಅವರು ಪ್ರೇರಣೆಯಾಗಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಖರೀದಿಗೆ ಮುನ್ನ ಈ ಅಂಶ ನಿಮ್ಮ ಗಮನದಲ್ಲಿರಲಿ
ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಮಾತನಾಡಿ, ಹಿರಿಯ ಮಾರ್ಗದರ್ಶಕ, ಸಾಮಾಜಿಕ ಕಳಕಳಿ ಹೊಂದಿದ್ದ ಭಾಸ್ಕರ್ ರಾವ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಹಿರಿಯ ಪತ್ರಕರ್ತ ಶ್ರೀರಂಗ ಕಟ್ಟಿ ಮಾತನಾಡಿ, ಬರಹಗಾರನಲ್ಲಿ ಅಧ್ಯಯನಶೀಲತೆ, ಕಾಗುಣಿತದ ಶುದ್ಧತೆ ಇರಬೇಕು ಎನ್ನುತ್ತಿದ್ದ ಭಾಸ್ಕರ್ ರಾವ್ ನಡೆದಾಡುವ ವಿಶ್ವಕೋಶದಂತಿದ್ದರು ಎಂದು ತಿಳಿಸಿದರು.
ಪತ್ರಕರ್ತ ನಾಗರಾಜ ಮದ್ಗುಣಿ ಮಾತನಾಡಿ, ಸ್ನೇಹ ಜೀವಿಯಾಗಿದ್ದ ಭಾಸ್ಕರ್ ರಾವ್ ಪತ್ರಿಕೋದ್ಯಮದ ಎಲ್ಲ ವಯಸ್ಸಿನವರೊಂದಿಗೆ ಬೆರೆಯುತ್ತಿದ್ದರಲ್ಲದೇ, ಅವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಯುವ ಪತ್ರಕರ್ತರೆಂದರೆ ಅವರಿಗೆ ಅಚ್ಚುಮೆಚ್ಚಾಗಿತ್ತು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಬರಹಗಾರ ಬೀರಣ್ಣ ನಾಯಕ ಮೊಗಟಾ ಮಾತನಾಡಿದರು.
ಇದನ್ನೂ ಓದಿ: Sanchar Saathi: ಅಕಸ್ಮಾತ್ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ತಕ್ಷಣ ಹೀಗೆ ಮಾಡಿ…
ಈ ಸಂದರ್ಭದಲ್ಲಿ ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ, ಕೆ.ಎಸ್.ಭಟ್ಟ, ಪ್ರಭಾ ಜಯರಾಜ, ಜಯರಾಜ್ ಗೋವಿ, ಜಿ.ಎನ್.ಭಟ್ಟ ತಟ್ಟಿಗದ್ದೆ, ಕೇಬಲ್ ನಾಗೇಶ, ಸಿ.ಆರ್.ಶ್ರೀಪತಿ, ಜಗದೀಶ ನಾಯಕ, ವಿಶ್ವೇಶ್ವರ ಗಾಂವ್ಕರ್, ಶ್ರೀಧರ ಅಣಲಗಾರ ಉಪಸ್ಥಿತರಿದ್ದರು.