ಕಾರವಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡ ವತಿಯಿಂದ ಮಾರ್ಚ್ 8ರಂದು ಮುರ್ಡೇಶ್ವರದಲ್ಲಿ (Murdeshwar) ಮಹಾಶಿವರಾತ್ರಿಯನ್ನು (Maha Shivaratri) ಆಚರಿಸಲಾಗುವುದು ಎಂದು (Uttara Kannada News) ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಮಾ.8 ರಂದು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಮುರ್ಡೇಶ್ವರದ ಕಡಲ ಕಿನಾರೆ ಬಳಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರಿಂದ ಶಿವನಿಗೆ ಸಂಬಂಧಿಸಿದ ವಿವಿಧ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇದನ್ನೂ ಓದಿ: Karnataka Weather : ಜನತೆಯ ಬೆವರಿಳಿಸುತ್ತಿದೆ ಬಿಸಿಲು; ಬೆಂಗಳೂರಲ್ಲಿ ಬೀಸಲಿದೆ ಬಿಸಿ ಗಾಳಿ
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ ನೃತ್ಯಗಾರರು ಆಗಮಿಸಲಿದ್ದು, ಶಿವತಾಂಡವ, ಶಿವ ಪುರಾಣ, ಶಿವಲೀಲೆ ನೃತ್ಯ ಕಾರ್ಯಕ್ರಮಗಳು ಹಾಗೂ ಶಿವನಿಗೆ ಸಂಬಂಧಿಸಿದ ಭಕ್ತಿ ಗೀತೆಗಳು ಹಾಗೂ ವಾದ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 8 ರಂದು ನಡೆಯುವ ಈ ಅಭೂತಪೂರ್ವ ಭಕ್ತಿ ಪೂರ್ವಕವಾದ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಮಹಾಶಿವರಾತ್ರಿಯ ಜಾಗರಣೆಯ ಅರ್ಥಪೂರ್ಣವಾದ ಈ ಭಕ್ತಿ ಭಾವದಲ್ಲಿ ಪರಶಿವನ ಧ್ಯಾನದಲ್ಲಿ ತಲ್ಲಿನರಾಗುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Vastu Tips: ನಕಾರಾತ್ಮಕ ಶಕ್ತಿ ಹೊಡೆದೋಡಿಸಲು ಈ ವಾಸ್ತು ಟಿಪ್ಸ್ ಪಾಲಿಸಿ…
ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಚಿಸುವ ಕಲಾವಿದರು ಮತ್ತು ಕಲಾತಂಡಗಳು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಅವರನ್ನು ಮೊ.ಸಂ. 85536 29978 ರಲ್ಲಿ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.