ಬನವಾಸಿ: ಪಟ್ಟಣದಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು (Mahashivaratri) ಸಡಗರ ಸಂಭ್ರಮದಿಂದ, ಶ್ರದ್ಧಾ ಭಕ್ತಿಯಿಂದ (Uttara Kannada News) ಆಚರಿಸಲಾಯಿತು.
ಪಟ್ಟಣದ ಐತಿಹಾಸಿಕ, ಪುರಾತನ ಶ್ರೀ ಮಧುಕೇಶ್ವರ ದೇವಸ್ಥಾನ ಹಾಗೂ ಸಮೀಪದ ಗುಡ್ನಾಪುರದ ಶ್ರೀ ಬಂಗಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಳಿಗ್ಗೆಯಿಂದಲೇ ಭಕ್ತಾದಿಗಳು ಶಿವಲಿಂಗಕ್ಕೆ ಬಿಲ್ವಪತ್ರೆ, ಹೂಗಳನ್ನು ಅರ್ಪಿಸಿ, ಜಲ, ಹಾಲು, ಎಳನೀರು, ತುಪ್ಪಗಳಿಂದ ಅಭಿಷೇಕ ಮಾಡಿ, ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Additional Cess: ಇನ್ನು ವಾಹನ ನೋಂದಣಿ ಮತ್ತಷ್ಟು ದುಬಾರಿ; ಹೆಚ್ಚುವರಿ ಶೇ.3 ಸೆಸ್, EVಗಳಿಗೆ ಲೈಫ್‌ಟೈಮ್ ಟ್ಯಾಕ್ಸ್!
ಬೆಳಿಗ್ಗೆಯಿಂದಲೇ ಪಟ್ಟಣದ ಶ್ರೀ ಮಧುಕೇಶ್ವರ ದೇವಸ್ಥಾನ ಹಾಗೂ ಗುಡ್ನಾಪುರದ ಶ್ರೀ ಬಂಗಾರೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಇದನ್ನೂ ಓದಿ: IPL 2024 : ಮುಂಬೈ ಇಂಡಿಯನ್ಸ್ ತಂಡದ ಹೊಸ ಜೆರ್ಸಿ ಹೀಗಿದೆ ನೋಡಿ; ಈ ಬಾರಿ ಏನು ವಿಶೇಷ?
ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ನಮೋ ಅಭಿಮಾನಿ ಬಳಗ, ಗುಡ್ನಾಪುರ ಸಮೀಪದ ಕ್ಯಾಂಪ್ಕೋ ಅಯ್ಯಪ್ಪ ಸೇವಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ತಂಪು ಪಾನೀಯ, ಹಣ್ಣು, ಪ್ರಸಾದ ಸೇವೆಯನ್ನು ಸಲ್ಲಿಸಿದರು.