Site icon Vistara News

Uttara Kannada News: ಅಮೃತ ಕಳಶ ಯಾತ್ರೆ ಯಶಸ್ವಿಗೊಳಿಸಿ: ಡಿಸಿ ಗಂಗೂಬಾಯಿ ಮಾನಕರ್

Uttara Kannada News Meeting on Amrita Kalash Yatra at Karwar Dc office

ಕಾರವಾರ: ಅಜಾದಿ ಕಾ ಅಮೃತ ಮಹೋತ್ಸವ (Azadi Ka Amrita Mahotsava) ಪ್ರಯುಕ್ತ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ಮೇರಿ ಮಾಟಿ ಮೇರಿ ದೇಶ್’ (ನನ್ನ ಮಣ್ಣು, ನನ್ನ ದೇಶ) ಕಾರ್ಯಕ್ರಮವನ್ನು ಆಚರಿಸಲಾಗಿದ್ದು, ಇದರ ಮುಂದುವರೆದ ಭಾಗವಾಗಿ ನಡೆಯುವ ಅಮೃತ ಕಳಶ ಯಾತ್ರೆ (Amrita Kalash Yatra) ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮೇರಿ ಮಾಟಿ ಮೇರಾ ದೇಶದ ಅಮೃತ ಕಳಶ ಯಾತ್ರೆಯನ್ನು ಹಮ್ಮಿಕೊಳ್ಳುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಮೃತ ಕಳಶ ಯಾತ್ರೆಯ ಅಂಗವಾಗಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲಾ ಹಳ್ಳಿಗಳಿಂದ ಮಣ್ಣು ಅಥವಾ ಅಕ್ಕಿಯನ್ನು ಸಂಗ್ರಹಿಸಲಾಗಿದ್ದು, ಇದನ್ನು ಕಳಶದಲ್ಲಿ ತುಂಬಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಸಿ, ಅದನ್ನು ತಾಲೂಕು (ಬ್ಲಾಕ್) ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಳುಹಿಸಿಕೊಡಬೇಕು.

ಇದನ್ನೂ ಓದಿ: Health Benefits Of Coriander: ಕೊತ್ತಂಬರಿ ಬೀಜ, ಸೊಪ್ಪುಗಳ ಪ್ರಯೋಜನ ಎಷ್ಟೊಂದು!

ತಾಲೂಕು ಮಟ್ಟದಲ್ಲಿಯೂ ವೈವಿದ್ಯಮಯ ಕಾರ್ಯಕ್ರಮ ನಡೆಸಿ, ಸಂಗ್ರಹಿಸಿದ ಅಮೃತ ಕಳಸವನ್ನು ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಳುಹಿಸಿಕೊಡಬೇಕು. ಸೆ.30 ರೊಳಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಮೃತ ಕಳಸ ಯಾತ್ರೆ ಕಾರ್ಯಕ್ರಮ ಮಾಡಿ ತಾಲೂಕು ಮಟ್ಟಕ್ಕೆ ಕಳುಹಿಸುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಗ್ರಾ.ಪಂಗಳಲ್ಲಿ ಅಮೃತ ಕಳಶ ಯಾತ್ರೆಯ ಕುರಿತು ಬ್ಯಾನರ್‌ಗಳನ್ನು ಅಳವಡಿಸಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಕಾರ್ಯಕ್ರಮದ ಫೋಟೋವನ್ನು ಆಫ್‌ಲೋಡ್ ಮಾಡಿ, ಸರ್ಟಿಫಿಕೇಟ್ ಕೂಡ ಪಡೆಯಬಹುದು ಎಂದರು.

ಇದನ್ನೂ ಓದಿ: Weather report : ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಸಭೆಯಲ್ಲಿ ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಆರ್.ದೇವರಾಜ, ಕಲ್ಯಾಣಿ ಕಾಂಬಳೆ, ಡಾ.ನಯನಾ ಎನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೇಲ್ಲಾ ವರ್ಗಿಸ್, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಯಶ್ವಂತ ಯಾದವ, ತಾ.ಪಂ. ಇಒಗಳು, ತಹಶೀಲ್ದಾರರು, ನಗರಸಭೆ ಪೌರಾಯುಕ್ತರು, ಪಟ್ಟಣ ಪಂಚಾಯತ್ ಮತ್ತು ಪುರಸಭೆ ಅಧಿಕಾರಿಗಳು ಇದ್ದರು.

Exit mobile version