Site icon Vistara News

Uttara Kannada News: 400 ಸೀಟ್ ಬರಬೇಕು ಎನ್ನುವುದು ಸಂವಿಧಾನ ತೆಗೆಯುವ ಉದ್ದೇಶ ಇರಬೇಕು: ಸಚಿವ ಮಂಕಾಳ ವೈದ್ಯ ಆರೋಪ

Uttara Kannada district incharge minister mankala vaidya latest statement

ಕಾರವಾರ: ಬಿಜೆಪಿಯು (BJP) 400 ಸ್ಥಾನ ಗೆದ್ದರೆ ಸಂವಿಧಾನ (Constitution) ತಿದ್ದುಪಡಿಗೆ ಅನುಕೂಲವಾಗಲಿದೆ ಎನ್ನುವ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ತೀವ್ರ ಖಂಡನೀಯ. ಸಂವಿಧಾನ ತಿದ್ದುಪಡಿ ಮಾಡಲು 400 ಸೀಟ್ ಬೇಕಾಗಿಲ್ಲ. 400 ಸೀಟ್ ಬರಬೇಕು ಎನ್ನುವುದನ್ನು ನೋಡಿದರೆ ಸಂವಿಧಾನವನ್ನೇ ತೆಗೆಯುವ ಉದ್ದೇಶ ಇರಬೇಕು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್‌ ವೈದ್ಯ (Uttara Kannada News) ಆರೋಪಿಸಿದ್ದಾರೆ.

ಇದನ್ನೂ ಓದಿ: Winter Season End Sale 2024: ವಿಂಟರ್‌ ಸೀಸನ್‌ ಎಂಡ್‌ ಸೇಲ್‌ನಲ್ಲಿ ಶಾಪಿಂಗ್‌ ಮಾಡುವವರಿಗೆ 5 ಸಿಂಪಲ್‌ ಟಿಪ್ಸ್

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ವಸ್ತುಪ್ರದರ್ಶನ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನವನ್ನು ತೆಗೆದು ದೇಶವನ್ನು ಅಂಬಾನಿ, ಅದಾನಿಗೆ ಕೊಡುವ ಉದ್ದೇಶ ಇರಬೇಕು. ಅನಂತಕುಮಾರ ಅವರನ್ನು ಮೊದಲು ಅವರ ಪಕ್ಷದವರು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Karnataka Weather : ಕಾದ ಕಾವಲಿಯಾದ ಬೆಂಗಳೂರು; ತಾಪಮಾನ ಮತ್ತಷ್ಟು ಏರಿಕೆ!

ಸಂಸದ ಅನಂತಕುಮಾರ ಹೆಗಡೆ ಅವರನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುವುದಾದರೆ ಸಂವಿಧಾನ ಬದಲಿಸುವ ಉದ್ದೇಶ ಇರಬೇಕು. ಬಿಜೆಪಿ ನಾಯಕರ ಪ್ರೇರಣೆ ಇಲ್ಲದೆ ಇವರು ಮಾತನಾಡಿದ್ದಾರಾ ಎಂದ ಅವರು, ನಮ್ಮ ಪಕ್ಷದಲ್ಲಿ ಇಂತಹ ಹೇಳಿಕೆ‌ ನೀಡಿದ್ದರೆ ನಮ್ಮನ್ನು ಪಕ್ಷದಲ್ಲಿ ‌ಇಟ್ಟುಕೊಳ್ಳುತ್ತಿರಲಿಲ್ಲ. ನಾವು ಶಾಸಕರಾಗಿರುವುದು, ಅನಂತಕುಮಾರ ಹೆಗಡೆ ಸಂಸದರಾಗಿರುವುದು ಸಂವಿಧಾನದಿಂದಲೇ ಎಂದು ಸಚಿವ ಮಂಕಾಳು ವೈದ್ಯ ಆಕ್ರೋಶ ವ್ಯಕ್ತಪಡಿಸಿದರು.

Exit mobile version