Site icon Vistara News

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Retired Teacher G T Bhatt Bommanahalli 80th celebration programme on May 19

ಯಲ್ಲಾಪುರ: ಸಾವಿರಾರು ಮಂದಿಯ ಶಿಷ್ಯವೃಂದ ಹೊಂದಿರುವ ನಿವೃತ್ತ ಶಿಕ್ಷಕ ಜಿ.ಟಿ. ಭಟ್ ಬೊಮ್ಮನಹಳ್ಳಿ ಅವರು ಶಿಕ್ಷಣ ಕ್ಷೇತ್ರದೊಂದಿಗೆ ಯಕ್ಷಗಾನ, ನಾಟಕ ಹಾಗೂ ಕೃಷಿ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ 80ರ ಸಂಭ್ರಮವನ್ನು ಅವರ ಶಿಷ್ಯ ವೃಂದದವರಿಂದ ಅಭಿನಂದನಾ ಸಮಾರಂಭವನ್ನು ಮೇ 19ರಂದು ಆಯೋಜಿಸಲಾಗಿದೆ ಎಂದು ಅಭಿನಂದನಾ ಕಾರ್ಯಕಾರಿ ಸಮಿತಿ ಸಂಚಾಲಕ ಜಿ.ಎನ್‌. ಶಾಸ್ತ್ರಿ (Uttara Kannada News) ಹೇಳಿದರು.

ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 80ರ ಸಂಭ್ರಮದ ಅಭಿನಂದನಾ ಕಾರ್ಯಕ್ರಮವನ್ನು ಮೇ 19ರಂದು ಮಧ್ಯಾಹ್ನ 3 ಗಂಟೆಗೆ ಮಂಚೀಕೇರಿಯ ರಾಜರಾಜೇಶ್ವರಿ ರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಹೊಸಪೇಟೆಯ ಯಾಜಿ ಪ್ರಕಾಶನ ಪ್ರಕಟಿಸಿರುವ ಬೊಮ್ಮನಹಳ್ಳಿ ಜಂಗಮ ಗೌರವ ಗ್ರಂಥವನ್ನು ಕವಿ, ಕಥೆಗಾರ ಜಯಂತ ಕಾಯ್ಕಿಣಿ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಹೆಗ್ಗೋಡು, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಹಲ್ಯಾ ಶರ್ಮ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಮಂಚಿಕೇರಿಯ ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ನಂತರ ನಡೆಯುವ ವಾಮನ ಚರಿತ್ರೆ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ದಂತಳಿಕೆ, ನರಸಿಂಹ ಭಟ್ಟ ಹಂಡ್ರಮನೆ ಮೃದಂಗ, ಪ್ರಮೋದ್ ಯಲ್ಲಾಪುರ ಚಂಡೆ, ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್, ಜಬ್ಬಾರ್‌ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪಂ. ಗಣಪತಿ ಭಟ್ ಹಾಸಣಗಿ, ಕೆ ವಿ ಅಕ್ಷರ ಹೆಗ್ಗೋಡು, ವಿದ್ಯಾ ಹೆಗ್ಗೋಡು, ಪ್ರಮೋದ್ ಹೆಗಡೆ ಯಲ್ಲಾಪುರ, ಬಿ ಆರ್ ವೆಂಕಟರಮಣ ಐತಾಳ ಹೆಗ್ಗೋಡು, ಆರ್ ಜಿ ಭಟ್ಟ ಹಾಸಣಗಿ, ಡಾ.ರಾಜಪ್ಪ ದಳವಾಯಿ, ಹಬ್ಬು ಸಹೋದರು, ವಿ.ಎನ್. ಹೆಗಡೆ ಬೆದೆಹಕ್ಲು, ನಾರಾಯಣ ಯಾಜಿ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿ ಸದಸ್ಯರು ಹಾಗೂ ಜಿ.ಟಿ. ಭಟ್ಟರ ಶಿಷ್ಯರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಾಸೂಕಿ ಹೆಗಡೆ ಮಳಗಿಮನೆ, ಗಣೇಶ ರೋಕಡೆ ಮಂಚಿಕೇರಿ, ವಿಶ್ವನಾಥ ಬಾಮಣಕೊಪ್ಪ, ಜ್ಯೋತಿ ಭಟ್ಟ,ವಿದ್ಯಾ ಶರ್ಮಾ, ಡಾ.ಶೀಲಾ, ಶ್ರೀಪಾದ ಭಟ್ಟ ಇದ್ದರು.

Exit mobile version