Site icon Vistara News

Uttara Kannada News: ಯಲ್ಲಾಪುರದಲ್ಲಿ ನ.1ರಿಂದ ಸಂಕಲ್ಪ ಉತ್ಸವ: ಪ್ರಮೋದ್ ಹೆಗಡೆ

Sankalpa Seva samsthe President Pramoda Hegade Pressmeet at Yallapur

ಯಲ್ಲಾಪುರ: ಕಲೆ (Art), ಸಂಸ್ಕೃತಿ (Culture), ಜನಪದ ಕಲೆಗಳು ಹಾಗೂ ನಿಸರ್ಗ ಪ್ರವಾಸೋದ್ಯಮದ ಒಗ್ಗೂಡುವಿಕೆಯೇ ಸಂಕಲ್ಪ ಉತ್ಸವ. ಇದು ಕೇವಲ ವ್ಯಕ್ತಿಗತ ಕಾರ್ಯಕ್ರಮವಾಗದೆ, ಸಾರ್ವಜನಿಕರ ಕಾರ್ಯಕ್ರಮವಾಗಿದೆ. 36 ವಸಂತಗಳನ್ನು ಪೂರೈಸಿರುವ ನಮ್ಮ ಸಂಕಲ್ಪ ಉತ್ಸವವು ಈ ಬಾರಿ 37 ನೇ ವರ್ಷಾಚರಣೆಯಲ್ಲಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ಪಟ್ಟಣದ ಯು.ಕೆ. ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಕಲ್ಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Tej Cyclone: ನಾಳೆ ತೀವ್ರವಾಗಲಿದೆ ಅರಬ್ಬಿ ಸಮುದ್ರದ ‘ತೇಜ್’ ಚಂಡಮಾರುತ! ಅಪ್ಪಳಿಸುತ್ತಾ ಮುಂಬೈ ಕರಾವಳಿಗೆ?

ಈ ಬಾರಿಯ ಸಂಕಲ್ಪ ಉತ್ಸವವನ್ನು ನ.01 ರಿಂದ ನ.05 ರ ವರೆಗೆ ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯಲಿದ್ದು, ಈ ಬಾರಿ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ನೆರವೇರಿಸಲಿದ್ದಾರೆ. ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅದರೊಂದಿಗೆ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರಿಗೆ ಸಂಕಲ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೆ ಈ ಬಾರಿ ರಕ್ತದಾನ ಶಿಬಿರ, ನೇತ್ರದಾನದ ಕುರಿತು ಜಾಗೃತಿ ಹಾಗೂ ಮಹಿಳೆಯರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನೂ ಸಹ ಏರ್ಪಡಿಸಲಾಗಿದೆ. ನ.01 ರಂದು ನೃತ್ಯರೂಪಕ ಹಾಗೂ ಭೀಷ್ಮ ವಿಜಯ, ನ.02 ರಂದು ಸುಧನ್ವಾರ್ಜುನ, ನ.03 ರಂದು ಕನಕಾಂಗಿ ಕಲ್ಯಾಣ, ನ.04 ರಂದು ಕೀಚಕವಧೆ ಹಾಗೂ ನ.05 ರಂದು ಸಮಾರೋಪ ಸಮಾರಂಭದೊಂದಿಗೆ ಚೂಡಾಮಣಿ ದರ್ಶನ ಯಕ್ಷಗಾನ ನಡೆಯಲಿದೆ ಎಂದರು.

ಇದನ್ನೂ ಓದಿ: Ballari News: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ; ಆರೋಪಿಯ ಬಂಧನ

ಸುದ್ದಿಗೋಷ್ಟಿಯಲ್ಲಿ ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ, ಕಾರ್ಯಕ್ರಮದ ಯಕ್ಷಗಾನ ಸಂಯೋಜಕ ಸಿ.ಜಿ. ಹೆಗಡೆ, ಗೋಪಣ್ಣ ತಾರಿಮಕ್ಕಿ, ಪಿ.ಜಿ. ಹೆಗಡೆ ಕಳಚೆ, ಜಿ.ಎಸ್.‌ ಭಟ್‌, ನಾಗೇಂದ್ರ ಕವಾಳೆ, ಶ್ರೀಪಾದ ಭಟ್ಟ, ಮಹಾಬಲೇಶ್ವರ ಉಪಸ್ಥಿತರಿದ್ದರು.

Exit mobile version