Site icon Vistara News

Uttara Kannada News: ಗಾಂಜಾ ಮಾರುತ್ತಿದ್ದವನ ಬಂಧನ; 80 ಸಾವಿರ ರೂ. ಮೌಲ್ಯದ ಗಾಂಜಾ ವಶ

Selling ganja Arrest of accused at mundagoda

ಮುಂಡಗೋಡ: ಗಾಂಜಾ (Ganja) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮುಂಡಗೋಡ ಠಾಣೆಯ ಪೊಲೀಸರು (Mundagoda Police Station) ಬಂಧಿಸಿ, ಆತನಿಂದ 2 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುವ (Seized) ಘಟನೆ ತಾಲೂಕಿನ ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಬಳಿ ಜರುಗಿದೆ.

ಹಾನಗಲ್ ತಾಲೂಕಿನ ತಿರವಳ್ಳಿ ಗ್ರಾಮದ ಸಲ್ಮಾನ್ ಖಾನ್ ಆಲೂರ (24) ಬಂಧಿತ. ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯ ಹತ್ತಿರ ಕೈ ಚೀಲದಲ್ಲಿ 2 ಕೆ.ಜಿ 28 ಗ್ರಾಂ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದಾಗ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ 80 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: CCB operation : ಬೃಹತ್‌ ಆನ್‌ಲೈನ್‌ ಹೂಡಿಕೆ ವಂಚನೆ ಜಾಲ ಭೇದಿಸಿದ ಸಿಸಿಬಿ; 6 ಮಂದಿ ಅರೆಸ್ಟ್‌

ಸಿಪಿಐ ಬಿ.ಎಸ್‌. ಲೋಕಾಪುರ ನಿರ್ದೇಶನದಂತೆ ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರ ಮತ್ತು ಹನಮಂತ ಕುಡಗುಂಚಿ ನೇತೃತ್ವದಲ್ಲಿ ಸಿಬ್ಬಂದಿಯಾದ ಗಣಪತಿ ಹೊನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಗೇರ, ಬಸವರಾಜ ಲಮಾಣಿ, ಸಂಜು ರಾಠೋಡ ಗುರುರಾಜ ಬಿ ಸೇರಿದಂತೆ ಹಲವರು ದಾಳಿಯ ಭಾಗವಾಗಿದ್ದರು.

Exit mobile version