ಕುಮಟಾ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹಾರಿಸಿದ ಹನುಮ ಧ್ವಜವನ್ನು ಪೊಲೀಸರ ಮೂಲಕ ಕೆಳಗಿಳಿಸಿದ ಕಾಂಗ್ರೆಸ್ ರಾಜ್ಯ ಸರ್ಕಾರ ನಾಚಿಕೆಗೆಟ್ಟ ಸರ್ಕಾರ ಎಂದು (Uttara Kannada News) ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.
ಪಟ್ಟಣದ ಹವ್ಯಕ ಸಭಾಭವನದಲ್ಲಿ ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆಯವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದನ್ನೂ ಓದಿ: Money Guide : ಮ್ಯೂಚುವಲ್ ಫಂಡ್‌ನಲ್ಲಿ ನೆಟ್ ಅಸೆಟ್ ವಾಲ್ಯೂ (NAV) ಎಂದರೇನು?
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಹಿಂದಿನ ಅವಧಿಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತದೆ. ಇದು ಪಕ್ಷಗಳ ನಡುವಿನ ಚುನಾವಣೆ ಅಲ್ಲ. ರಾಮ ಭಕ್ತರ ಮತ್ತು ಟಿಪ್ಪು ಭಕ್ತರ ನಡುವಿನ ಹೋರಾಟ ಎಂದ ಅವರು, ಶ್ರೀರಾಮ ಚರಿತ್ರೆ ಕಾಲ್ಪನಿಕ ಎಂದು ಕೋರ್ಟ್‌ಗೆ ವರದಿ ಮಾಡಿದ್ದು ಇದೇ ಕಾಂಗ್ರೆಸ್ ಸರ್ಕಾರ. ಈ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಿಂದರೂ ರಾಮ ಭಕ್ತರ ವಿರುದ್ದವೇ ಹೇಳಿಕೆ ನೀಡುತ್ತ ಬಂದಿದ್ದರು. ಈಗ ಜೈ ಶ್ರೀ ರಾಮ ಎನ್ನುವ ಮಟ್ಟಿಗೆ ಅವರು ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಂಡಿದ್ದಾರೆ ಎಂದರೆ ಇದು ರಾಮ ಭಕ್ತರ ಗೆಲುವಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ನಂಬಿದ ಜನರು ಈಗ ಭ್ರಮನಿರಸನಗೊಂಡಿದ್ದಾರೆ. ಸುಳ್ಳು, ದಿವಾಳಿತನದ ಸರ್ಕಾರದ ವಾಸ್ತವತೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವಾಗಬೇಕು. ಅದರ ಜತೆಗೆ ನಮ್ಮ ಮೋದಿಜಿಯವರ ನೇತೃತ್ವದಲ್ಲಿ ಕೈಗೊಂಡ ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಮೂಲಕ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ: Chapped Lips: ಈ ಚಳಿಗಾಲದಲ್ಲಿ ತುಟಿ ಬಿರಿಯುತ್ತಿದೆಯೇ? ಇಲ್ಲಿದೆ ಮದ್ದು!
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಅವರು ನೂತನ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ ಅವರಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಪಕ್ಷದ ಜಿಲ್ಲಾಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಎಂಎಲ್‌ಸಿ ಶಾಂತರಾಮ ಸಿದ್ದಿ, ಪ್ರಮುಖರಾದ ವಿವೇಕಾನಂದ ವೈದ್ಯ, ಶಶಿಭೂಷಣ ಹೆಗಡೆ, ಕೆ.ಜಿ. ನಾಯ್ಕ, ಎಂ ಜಿ ನಾಯ್ಕ ಸೇರಿದಂತೆ ಇತರರು ಇದ್ದರು.