Site icon Vistara News

Uttara Kannada News: ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಪ್ರಮೋದ್ ಹೆಗಡೆ

Taluka level Pratibha karanji and Kalotsava programme inauguration at Yallapur

ಯಲ್ಲಾಪುರ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆಯ ಅವಶ್ಯಕತೆ ಇದೆ. ಅದಕ್ಕೆ ಪ್ರತಿಭಾ ಕಾರಂಜಿಯು (Pratibha karanji) ಅತ್ಯಂತ ಸೂಕ್ತವಾಗಿದೆ ಎಂದು ಪಂಚಾಯತ್‌ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಹೇಳಿದರು.

ಪಟ್ಟಣದ ವೈಟಿಎಸ್ಎಸ್ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯೊಂದಿಗೆ, ಶಿಕ್ಷಕರ ತೊಡಗುವಿಕೆಯೂ ಅಷ್ಟೆ ಮುಖ್ಯವಾಗಿದೆ. ಇಲ್ಲವಾದಲ್ಲಿ ಮಕ್ಕಳಿಗೆ ಪೂರಕವಾದ ಮಾರ್ಗದರ್ಶನದ ಕೊರತೆಯಾಗಬಹುದು ಎಂದು ತಿಳಿಸಿದರು.

ಪ್ರತಿ ಕಾರ್ಯಕ್ರಮದಲ್ಲಿ ಕೆಲವು ಸಮಯವನ್ನು ಮಕ್ಕಳ ಕಾರ್ಯಕ್ರಮಗಳಿಗಾಗಿ ಮೀಸಲಿಡಬೇಕು. ಆ ಮೂಲಕ ಮಕ್ಕಳ ಪ್ರತಿಭೆಗೆ ನಾವೆಲ್ಲಾ ಪ್ರೋತ್ಸಾಹ ನೀಡಬೇಕು ಎಂದರು.

ಇದನ್ನೂ ಓದಿ: Home Remedies For Cough And Cold: ನೆಗಡಿ, ಕೆಮ್ಮೇ? ಬದಲಾಗುತ್ತಿರುವ ವಾತಾವರಣಕ್ಕೆ ಬೇಕಾದ ಮನೆಮದ್ದುಗಳಿವು

ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಮಕ್ಕಳಿಗೆ ಸಾಮಾಜಿಕ, ನೈತಿಕ ಹಾಗೂ ಕಲಾತ್ಮಕ ಶಿಕ್ಷಣ ನೀಡಬೇಕಿದೆ. ಅಂದಾಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಮಕ್ಕಳಿಗೆ ಅವರಲ್ಲಿರುವ ಶೈಕ್ಷಣಿಕ, ಸಾಂಸ್ಕೃತಿಕ, ಕ್ರಿಯಾತ್ಮಕ ಕಲೆಗಳನ್ನು ಬೆಳೆಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಆ ಮೂಲಕ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಬುನಾದಿಯನ್ನು ಈ ವೇದಿಕೆ ಒದಗಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಜಿಲ್ಲಾ. ಪ್ರೌ. ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ ನಾಯಕ, ತಾಲೂಕು ಅಧ್ಯಕ್ಷ ಚಂದ್ರಶೇಖರ, ತಾ. ಪ್ರಾ. ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಆರ್.ಆರ್. ಭಟ್, ವೈಟಿಎಸ್ಎಸ್ ಪ್ರಾಂಶುಪಾಲ ಆನಂದ ಹೆಗಡೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿನೋದ ನಾಯ್ಕ ಇದ್ದರು.

ಇದನ್ನೂ ಓದಿ: Turnip Benefits: ಟರ್ನಿಪ್‌ ಗಡ್ಡೆಯ ಬಗ್ಗೆ ಗೊತ್ತೆ? ಅದರ ಗುಣ ವಿಶೇಷಗಳನ್ನು ತಿಳಿಯಿರಿ

ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿದರು. ಶಿಕ್ಷಕ ವಿನೋದ್ ಭಟ್ ನಿರ್ವಹಿಸಿದರು. ಪ್ರಶಾಂತ್ ಜಿ.ಎನ್. ವಂದಿಸಿದರು.

Exit mobile version