Site icon Vistara News

Uttara Kannada News: ಯಲ್ಲಾಪುರದಲ್ಲಿ ಶಿಕ್ಷಕರ ದಿನಾಚರಣೆ

MLA Shivram Hebbar inaugurated the Teacher's Day program in Yallapur

ಯಲ್ಲಾಪುರ: ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುರುವಿಗೆ ಪವಿತ್ರವಾದ ಸ್ಥಾನವಿದೆ. ಯಾವುದೇ ಸ್ಥಾನದಲ್ಲಿರುವವರು ತಪ್ಪು ಮಾಡಿದರೆ ತೊಂದರೆಯಾಗುವುದಿಲ್ಲ. ಆದರೆ ಗುರುಗಳು ತಪ್ಪು ಮಾಡಿದರೆ ಅದು ಸಮಾಜದ ಮೇಲೆ ಪರಿಣಾಮ ಬೀಳುತ್ತದೆ. ಹೀಗಾಗಿ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸಮನಿ, ಆಧುನಿಕತೆಯ ನಡುವೆ ತರಗತಿ ಕೋಣೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಕೊಳ್ಳುವ ಸವಾಲು ಇಂದು ಶಿಕ್ಷಕರಿಗೆ ಎದುರಾಗಿದೆ. ತಂದೆ ತಾಯಿಯರು ಜನ್ಮ ನೀಡಿದರೆ, ತರಗತಿಯಲ್ಲಿ ಶಿಕ್ಷಕರು ನಮಗೆ ಜೀವನ ನೀಡುತ್ತಾರೆ. ಏನನ್ನು ಯೋಚಿಸಬೇಕು ಹಾಗೂ ಯಾವ ರೀತಿಯಲ್ಲಿ ಯೋಚಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ಕಾರ್ಯ ಮಾಡಬೇಕಿದೆ. ಇಂದಿನ ಕಾಲಕ್ಕೆ ತಕ್ಕಂತೆ ಅನುಭವ ಆಧಾರಿತ ಶಿಕ್ಷಣ ನೀಡುವ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: Zika Virus: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಹಾವಳಿ; ನಮಗೆಷ್ಟು ಅಪಾಯ? ಮುಂಜಾಗ್ರತಾ ಕ್ರಮಗಳು ಯಾವವು?

ಪಂ. ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ಮಾತನಾಡಿ, ಸಮಾಜದಲ್ಲಿ ಪ್ರತಿಭಾವಂತರ ಒಂದು ಸಮೂಹ ಆರಂಭವಾಗಬೇಕು. ಇದಕ್ಕೆ ಪ್ರೇರಣೆಯಾಗಿ ಇಂದು ಕೆಲ ಶಿಕ್ಷಕರನ್ನು ಸನ್ಮಾನಿಸಲಾಗಿದೆ. ನಾವು ಇಂದು ಗೌರವದಿಂದ ಬದುಕಲು ನಮ್ಮ ಶಿಕ್ಷಕರೇ ಕಾರಣ. ಪ್ರಾಥಮಿಕ ಶಿಕ್ಷಣ ನಮ್ಮ ಜೀವನಕ್ಕೆ ಅಡಿಪಾಯವನ್ನು ಹಾಕುವ ಕಾರ್ಯ ಮಾಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ ನಿವೃತ್ತಿ ಹೊಂದಿದ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಹಶೀಲ್ದಾರ್ ಗುರುರಾಜ್ ಎಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆರ್.ಆರ್. ಭಟ್, ಅಂಕೋಲಾ ಅರ್ಬನ್ ಬ್ಯಾಂಕ್ ನ ನಿರ್ದೇಶಕ ಭಾಸ್ಕರ್ ನಾರ್ವೇಕರ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮತ್ತಿತರರು ಇದ್ದರು.

ಇದನ್ನೂ ಓದಿ: Aadhaar update: ಆಧಾರ್‌ ವಿವರ ಈಗಲೇ ಉಚಿತವಾಗಿ ನವೀಕರಿಸಿ; ಎಲ್ಲಿ, ಹೇಗೆ, ಎಷ್ಟು ದಿನ?

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ್ ನಾಯ್ಕ, ರಶ್ಮಿ, ಭಾಸ್ಕರ್ ನಾಯ್ಕ, ನೆಲ್ಸನ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version