ಮುಂಡಗೋಡ: ತಾಲೂಕಿನ ಟಿಬೆಟಿಯನ್ (Tibetan Camp) ಕ್ಯಾಂಪ್ ನಂಬರ್ 4ರಲ್ಲಿ ಟಿಬೆಟಿಯನ್ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ (Murdered) ಘಟನೆ ನಡೆದಿದ್ದು, ಮತ್ತೊಬ್ಬ ಟಿಬೆಟಿಯನ್ ವ್ಯಕ್ತಿ ಗಂಭೀರ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಜಮಯಾಂಗ್ ಲೋಬ್ಸಂಗ್ (35) ಕೊಲೆಯಾದ ಟಿಬೆಟಿಯನ್ ವ್ಯಕ್ತಿ. ಗೊನಪ್ ಚೊಡೇಕ್ ಹತ್ಯೆ ಮಾಡಿದ ಆರೋಪಿಯಾಗಿದ್ದು, ಈತನು ಸಹ ಗಂಭೀರ ಗಾಯಗೊಂಡಿದ್ದಾನೆ. ಆರೋಪಿ ಗೊನಫ್ ಮಾಜಿ ಸೈನಿಕನಾಗಿದ್ದು ಕ್ಯಾಂಪ್ ನಂ 4 ನಿವಾಸಿ ಎಂದು ತಿಳಿದುಬಂದಿದೆ.
ಚಾಕು ಇರತದಿಂದ ಜಮಾಯಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಆರೋಪಿ ಗೊನಪ್ನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಬುಧವಾರ ಜಿಲ್ಲಾ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Home Remedies For Mosquito: ರಾಸಾಯನಿಕದ ಅಪಾಯ ಏಕೆ? ಈ ಉಪಾಯ ಬಳಸಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸಿ!
ಟಿಬೆಟಿಯನ್ ಸೆಟ್ಲಮೆಂಟ್ ಚೇರಮನ್ ಡೊಲ್ಮಾ ಸಿರಿಂಗ್, ಡಿವೈಎಸ್ಪಿ ಕೆ.ಎಲ್. ಗಣೇಶ, ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ ಇದ್ದರು.