ಕಾರವಾರ: ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಪ್ರವಾಸಿಗರ ಆಕರ್ಷಣೀಯವಾಗಿದ್ದ ಟುಪಲೇವ್ ಯುದ್ಧ ವಿಮಾನ ಮತ್ತು ಐ.ಎನ್.ಎಸ್ ಚಾಪೆಲ್ ಯುದ್ದ ನೌಕೆಯನ್ನು ಶನಿವಾರದಿಂದ ಸಾರ್ವಜನಿಕರ ವೀಕ್ಷಣೆಗೆ (Uttara Kannada News) ಮುಕ್ತಗೊಳಿಸಲಾಗಿದೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಐ.ಎನ್.ಎಸ್ ಚಾಪೆಲ್ ಯುದ್ದ ನೌಕೆ ಮತ್ತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಟುಪಲೇವ್ ಯುದ್ಧ ವಿಮಾನದ ಸಾರ್ವಜನಿಕ ವೀಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಸತೀಶ್ ಸೈಲ್, ಈ ಯುದ್ದ ವಿಮಾನ ಮತ್ತು ಯುದ್ಧ ನೌಕೆಗಳು ದೇಶದ ವಾಯುಪಡೆ, ನೌಕಾಪಡೆ ಮತ್ತು ಸೇನೆಯನ್ನು ಸೇರುವ ಜಿಲ್ಲೆಗೆ ಯುವ ಜನತೆಗೆ ತಾನೂ ಒಬ್ಬ ಧೀಮಂತ ಯೋಧನಾಗಬೇಕು ಎಂದು ಹೆಚ್ಚಿನ ಸ್ಪೂರ್ತಿ ನೀಡಲಿದೆ. ಹಲವು ಸ್ವಾತಂತ್ರ್ಯ ಹೋರಾಟಗಾರರು, ಪರಮವೀರ ಚಕ್ರ ಪುರಸ್ಕೃತ ರಾಘೋಬಾ ರಾಣೆ ಸೇರಿದಂತೆ ದೇಶಕ್ಕಾಗಿ ಬಲಿದಾನ ನೀಡಿದ ಹಲವು ವ್ಯಕ್ತಿಗಳು ಜಿಲ್ಲೆಯಲ್ಲಿದ್ದಾರೆ. ಕಾರವಾರಕ್ಕೆ ಐತಿಹಾಸಿಕ ಮಹತ್ವವಿದ್ದು, ಶಿವಾಜಿ ಮಹಾರಾಜರ ಅವಧಿಯ ಕೋಟೆಗಳು ಇಲ್ಲಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಕೂಡಾ ಅಭಿವೃದ್ದಿಗೊಳಿಸಲಾಗುವುದು ಎಂದರು.
ಇದನ್ನೂ ಓದಿ: Uttara Kannada News: ಜಿಲ್ಲೆಯ ಮಾಜಿ ಸೈನಿಕರು, ಅಶಕ್ತರಿಗೆ ಭೂಮಿ ಒದಗಿಸಲು ಕ್ರಮ: ಡಿಸಿ ಗಂಗೂಬಾಯಿ ಮಾನಕರ್
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಈ ಯುದ್ದ ವಿಮಾನ ಮತ್ತು ಯುದ್ಧ ನೌಕೆಗಳ ವೀಕ್ಷಣೆಗೆ ಅನುವು ಮಾಡಿಕೊಡುವಂತೆ ಸಾರ್ವಜನಿಕರಿಂದ ಕೂಡಾ ಕೋರಿಕೆ ಬರುತ್ತಿತ್ತು. ಇವುಗಳ ವೀಕ್ಷಣೆಗೆ ಅತ್ಯಂತ ಕಡಿಮೆ ದರ ನಿಗಧಿಪಡಿಸಲಾಗಿದೆ. ಇವುಗಳ ವೀಕ್ಷಣೆಯಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶದ ರಕ್ಷಣಾ ಪಡೆಗಳ ಬಗ್ಗೆ ಮತ್ತು ದೇಶಭಕ್ತಿಯ ಕುರಿತು ಅಭಿಮಾನ ಮೂಡಲಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಅವರಣವನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಇನ್ನೂ ಹೆಚ್ಚಿನ ಆಕರ್ಷಕ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಮಾತನಾಡಿ, ಟುಪಲೇವ್ ಯುದ್ಧ ವಿಮಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎಸಿ ಅಳವಡಿಕೆ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಆ ಕಾರ್ಯ ಮುಕ್ತಾಯಗೊಳ್ಳಲಿದೆ. ನಂತರ ಸಾರ್ವಜನಿಕರಿಗೆ ಯುದ್ಧ ವಿಮಾನದ ಒಳಗೆ ವೀಕ್ಷಣೆಗೆ ಅನುಮತಿ ನೀಡಲಾಗುವುದು. ಪ್ರಸ್ತುತ ಹೊರಗಿನಿಂದ ವೀಕ್ಷಣೆ ಮಾಡಬಹುದಾಗಿದೆ ಎಂದರು.
ಇದನ್ನೂ ಒದಿ: Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!
ಈ ವೇಳೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರ್ಷ ಹಾಗೂ ಇತರರು ಉಪಸ್ಥಿತರಿದ್ದರು.