ಬನವಾಸಿ: ಇಲ್ಲಿಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಲಕಟ್ಟ ಗ್ರಾಮದ ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ಕಳೆದೆರಡು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯನ್ನು (Unknown Person) ಕೊಲೆ (Murder) ಮಾಡಿ ಇಂಗು ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು ಮೂವರು ಆರೋಪಿಗಳನ್ನು (accused) ಬಂಧಿಸಿರುವ ಘಟನೆ ಸೋಮವಾರ ಜರುಗಿದೆ.
ಸುಮಾರು 45ರಿಂದ 50ವರ್ಷ ವಯಸ್ಸಿನ ವ್ಯಕ್ತಿಯನ್ನು ಶುಕ್ರವಾರ ಕೊಲೆಗೈದು ಅರಣ್ಯ ಪ್ರದೇಶದಲ್ಲಿ ಗೋಣಿ ಚೀಲ ಹಾಗೂ ಸೊಪ್ಪುಗಳಿಂದ ಮುಚ್ಚಿದ್ದರು. ಉತ್ತರ ಕನ್ನಡ ಪೋಲಿಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದರು.
ಪ್ರಕರಣ ದಾಖಲಾದ 24ಗಂಟೆಯಲ್ಲಿ ವಿಶೇಷ ತಂಡ ಅಪರಿಚಿತ ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ಗ್ರಾಮದ ಅಶೋಕ ಗಿರಿಯಪ್ಪ ಉಪ್ಪಾರ(48) ಎಂದು ಪತ್ತೆ ಹಚ್ಚಿದ್ದು, ಕೊಲೆ ಮಾಡಿದ ಮೂವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Shivamogga News: ಆಟೋದಲ್ಲಿ ಮರೆತು ಹೋದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ಗ್ರಾಮದ ಕಿರಣ ಪರಶುರಾಮ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ(19) ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಕಾರು, ಮೃತನ ಬೈಕ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Shreyas Iyer : ವಿಶ್ವ ಕಪ್ ತಂಡ ಆಯ್ಕೆಯ ಬಗ್ಗೆ ಗೌತಮ್ ಗಂಭೀರ್ ಗುಡುಗು; ಅವರ ಆಕ್ಷೇಪವೇನು?
ಶಿರಸಿ ಉಪವಿಭಾಗ ಪೋಲಿಸ್ ಉಪಾಧೀಕ್ಷಕ ಕೆ.ಎಲ್. ಗಣೇಶ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ್ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಚಂದ್ರಕಲಾ ಪತ್ತಾರ, ಸುನೀಲ್ ನಾಯಕ್, ಮಹಾಂತೇಶ ಕುಂಬಾರ, ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ, ಅನ್ಸಾರಿ, ಎಸ್.ಶಿವರಾಜ್, ಬಸವರಾಜ್ ಜಾಡರ್, ಕೆ.ಜಗದೀಶ್, ಶಿರಸಿ ವೃತ್ತ ಕಛೇರಿಯ ಸಿಬ್ಬಂದಿಗಳಾದ ಬಸವರಾಜ್ ಮ್ಯಾಗೇರಿ, ರಾಜು ಸಾಲಗಾವಿ, ಮಹಾದೇವ, ಮಹಾತೇಂಶ ರಾಮಯ್ಯ, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮುಕ್ತಿಯಾರ್, ಮಲ್ಲೇಶ ಪಾಲ್ಗೊಂಡಿದ್ದರು.