Site icon Vistara News

Uttara Kannada News: ಯಲ್ಲಾಪುರದಲ್ಲಿ ಡಿ.16ರಂದು ʼವಿಶ್ವದರ್ಶನ ಸಂಭ್ರಮʼ ಕಾರ್ಯಕ್ರಮ

Vishwadarshana Sambharama programme on December 16 at yallapur

ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ʼವಿಶ್ವದರ್ಶನ ಸಂಭ್ರಮʼ (Vishwadarshana Sambharama) ಕಾರ್ಯಕ್ರಮ ಡಿ.16ರಂದು ಶನಿವಾರ ನಡೆಯಲಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಶ್ವದರ್ಶನ ಎಜ್ಯುಕೇಶನ್‌ ಸೊಸೈಟಿಯಲ್ಲಿ ʼವಿಶ್ವದರ್ಶನ ಸಂಭ್ರಮʼ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಶಾಲಾ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಶಾಲೆಯ ಆಟದ ಮೈದಾನದಲ್ಲಿ ಬೃಹತ್‌ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.

ಡಿ.16ರಂದು ಶನಿವಾರ ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬಂಟ್ವಾಳದ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥರಾದ ಡಾ. ಪ್ರಭಾಕರ್‌ ಭಟ್‌ ಕಲ್ಲಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಧಾನ ಭಾಷಣ ಮಾಡಲಿದ್ದಾರೆ. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್‌ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಅವರು ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ.

ಇದನ್ನೂ ಓದಿ: BSE Sensex: ಮೊದಲ ಬಾರಿಗೆ ಐತಿಹಾಸಿಕ 71,000 ಗಡಿ ದಾಟಿದ ಸೆನ್ಸೆಕ್ಸ್‌

ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ್‌, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ, ಕೆನರಾ ಹೆಲ್ತ್‌ ಕೇರ್‌ ಸೆಂಟರ್‌ ಅಧ್ಯಕ್ಷ ಡಾ. ಜಿ. ಜಿ. ಹೆಗಡೆ ಕುಮಟಾ ಹಾಗೂ ಹೊನ್ನಾವರದ ಎಂ.ಪಿ.ಇ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಭಟ್‌, ಶಿವಾನಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶ್ವದರ್ಶನ ಪುರಸ್ಕಾರಕ್ಕೆ ಆಯ್ಕೆಯಾದ ಸಂಸ್ಕೃತ ಪ್ರಾಧ್ಯಾಪಕರು, ಮಾಜಿ ವಿಧಾನ ಪರಿಷತ್‌ ಸದಸ್ಯೆ ಡಾ. ಎಸ್‌.ಆರ್‌. ಲೀಲಾ.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸುಭದ್ರಾ ಇಂಡಸ್ಟ್ರೀಸ್‌ ಎಂ.ಡಿ ಶ್ರೀನಿವಾಸ್‌ ಹೆಬ್ಬಾರ್‌, ಸಂಸ್ಥೆಯ ನಿರ್ದೇಶಕರು ಹಾಗೂ ಮೈಸೂರು ಮರ್ಕಂಟೈಲ್‌ ಚೇರ್ಮನ್‌ ಡಾ. ಎಚ್.ಎಸ್‌. ಶೆಟ್ಟಿ ಮತ್ತು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಉಪಸ್ಥಿತರಿರಲಿದ್ದಾರೆ.

ವಿಶ್ವದರ್ಶನ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಸಿದ್ಧ ನಾಟಿ ವೈದ್ಯ, ಪಾರ್ಶ್ವವಾಯು ಚಿಕಿತ್ಸಕ ಹನುಮಂತ ಗೌಡ ಬೆಳ್ಳಂಬರ.

ಪ್ರತಿವರ್ಷದಂತೆ ಈ ಬಾರಿಯೂ ಸಾಮಾಜಿಕವಾಗಿ ಸಾಧನೆಗೈದವರನ್ನು ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಸಂಸ್ಕೃತ ಪ್ರಾಧ್ಯಾಪಕರು, ಮಾಜಿ ವಿಧಾನ ಪರಿಷತ್‌ ಸದಸ್ಯೆ, ಗ್ರಂಥಕರ್ತರು ಹಾಗೂ ಅಂಕಣಕಾರರಾದ ಡಾ. ಎಸ್‌.ಆರ್‌. ಲೀಲಾ ಅವರನ್ನು ಮತ್ತು ಪ್ರಸಿದ್ಧ ನಾಟಿ ವೈದ್ಯ, ಪಾರ್ಶ್ವವಾಯು ಚಿಕಿತ್ಸಕ, ವೈದ್ಯ ವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಹನುಮಂತ ಗೌಡ ಬೆಳ್ಳಂಬರ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಿ, ಗೌರವಿಸಲಾಗುವುದು.

Exit mobile version