ಯಲ್ಲಾಪುರ: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೆ, ವೈದ್ಯರ ಸಲಹೆ ಮೇರೆಗೆ ಮಂಗಳವಾರ ಸಂಜೆ 6 ಗಂಟೆಯವರೆಗೂ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಹೀಗಾಗಿ ರಾಜ್ಯಸಭೆ ಚುನಾವಣೆಗೆ (Rajya Sabha Election) ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಶಾಸಕ ಶಿವರಾಮ್ ಹೆಬ್ಬಾರ್ (Uttara Kannada News) ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ನನ್ನ ಆರೋಗ್ಯ ಸರಿ ಇರಲಿಲ್ಲ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೆ. ಮಧ್ಯಾಹ್ನದ ವೇಳೆ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ ಆರೋಗ್ಯ ಸ್ಥಿರವಾಗಲು ಸಂಜೆವರೆಗೂ ಸಮಯ ತೆಗೆದುಕೊಂಡಿತು. ಯಾರಿಗೂ ಹೆದರಿ ಬೆದರಿ ಮತದಾನಕ್ಕೆ ಹೋಗದೆ ಉಳಿದುಕೊಂಡಿಲ್ಲ, ಆ ಅವಶ್ಯಕತೆಯೂ ತನಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Grama Sahayaka : Good News; ಗ್ರಾಮ ಸಹಾಯಕರ ವೇತನ 2000 ರೂ. ಹೆಚ್ಚಳ
ನನಗೆ ಬಿಜೆಪಿ ಸ್ವಪಕ್ಷದ ಮೇಲೆ ಅಸಮಾಧಾನ ಇದೆ. ನನ್ನನ್ನು ಸ್ಥಳೀಯ ಬಿಜೆಪಿ ನಾಯಕರು ಸೋಲಿಸಲು ಪ್ರಯತ್ನಪಟ್ಟರು. ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದರೂ ಈವರೆಗೂ ಕ್ರಮ ಜರುಗಿಸಿಲ್ಲ ಎಂದರು.
ಇದನ್ನೂ ಓದಿ: Job Fair : ಉದ್ಯೋಗ ಮೇಳದಲ್ಲಿ 9,651 ಮಂದಿಗೆ ನೇರ ಜಾಬ್; ಇನ್ನು ವಿಭಾಗ ಮಟ್ಟದಲ್ಲಿ ಜಾಬ್ ಫೇರ್
ಕಾಂಗ್ರೆಸ್ ಸೇರ್ಪಡೆ ವಿಚಾರ ಉಹಾಪೋಹ. ನಾನು ಬಿಜೆಪಿಯ ಶಾಸಕನಾಗಿದ್ದು, ಇಲ್ಲಿ ಶಾಸಕನಾಗಿ ಉಳಿಯುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ ಎಂದರು. ಇದೇ ವೇಳೆ ಪಾಕಿಸ್ತಾನ ಪರ ಘೋಷಣೆಗೆ ಸಂಬಂಧಿಸಿ, ಇದನ್ನು ಯಾರೇ ಹೇಳಿದ್ದರೂ ಖಂಡನೀಯ ಎಂದು ಪ್ರತಿಕ್ರಿಯಿಸಿದರು.