ಕಾರವಾರ: ಮನುಷ್ಯನಿಗೆ ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಸಾಧನೆಯ (Achievement) ಹಾದಿ ಕಷ್ಟವಲ್ಲ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ (Uttara Kannada News) ಅಭಿಪ್ರಾಯಪಟ್ಟರು.
ಕುಮಟಾದಲ್ಲಿರುವ ದಯಾನಿಲಯ ವಿಶೇಷ ಚೇತನರ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಅಪರೂಪದಲ್ಲಿಯೇ ಅಪರೂಪದಂತಿರುವ ದಯಾನಿಲಯ ಶಾಲೆಯು ತನ್ನದೇ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ ಎಂದರು.
ಇದನ್ನೂ ಓದಿ: 3 ವರ್ಷದಲ್ಲಿ ಭಾರತ ಜಗತ್ತಲ್ಲೇ 3ನೇ ಬೃಹತ್ ಆರ್ಥಿಕ ರಾಷ್ಟ್ರ; ಜಾಗತಿಕ ಸಂಸ್ಥೆ ವರದಿ
ಸಂಸ್ಥಾಪಕ ಸಿರಿಲ್ ಲೊಪಿಸ್ ಅವರು ಸಮಾನ ಮನಸ್ಕರ ಅದ್ಭುತ ತಂಡ ಕಟ್ಟಿಕೊಂಡು ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನ ಮಕ್ಕಳಿಗೆ ಕಳೆದ ಹನ್ನೆರಡು ವರ್ಷಗಳಿಂದ ಟೇಬಲ್ ಟೆನಿಸ್, ಲಾನ್ ಟೆನಿಸ್, ಜುಡೋ, ಸ್ವಿಮ್ಮಿಂಗ್, ಸ್ಕೇಟಿಂಗ್, ವೇಟ್ ಲಿಫ್ಟಿಂಗ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ತರಬೇತಿ ನೀಡುತ್ತಿರುವುದು ಮಾತ್ರವಲ್ಲದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಪದಕ ಪಡೆಯುತ್ತಿರುವುದು ಸಂತಸದ ವಿಚಾರ. ವಿಶೇಷ ಚೇತನರ ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಗೇಮ್ಸ್ ನಲ್ಲಿ ಈ ಶಾಲೆಯ ಮಕ್ಕಳ ಸಾಧನೆ ಅಭಿನಂದನಾರ್ಹ ಮತ್ತು ಪ್ರೇರಣಾದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕ ಸಿರಿಲ್ ಶಾಲೆಯ ಪ್ರತಿಭಾನ್ವಿತ ಮಕ್ಕಳು, ಒಳಾಂಗಣ ಕ್ರೀಡಾಂಗಣ, ಮಕ್ಕಳ ಕಚೇರಿ, ಕೈತೋಟ ಸೇರಿದಂತೆ ಎಲ್ಲ ವಿಭಾಗಗಳನ್ನು ಸವಿವರವಾಗಿ ಪರಿಚಯಿಸಿದರು.
ಇದನ್ನೂ ಓದಿ: Affordable Bikes in India : ಕಡಿಮೆ ಬೆಲೆಗೆ ದೊರೆಯುವ ಭಾರತದ ಟಾಪ್ 5 ಬೈಕ್ಗಳು ಇವು
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನಾರಾಯಣ ಜಿ ನಾಯಕ, ಕುಮಟಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಎಲ್. ಭಟ್, ಜಿಲ್ಲಾ ಐಇಸಿ ಸಂಯೋಜಕರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.