Site icon Vistara News

Uttara Kannada News: ಜ.17ರಂದು ಯಲ್ಲಾಪುರದ ಉಮ್ಮಚಗಿಯಲ್ಲಿ ʼಉಪಾಸನಂʼ ಸಂಗೀತ ಕಾರ್ಯಕ್ರಮ

Upasanam Sangeetha programme at Ummachagi in Yallapur taluk on Jan 17

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾನಿಲಯದ ಶಾಲಾ ಕಟ್ಟಡ ನಿರ್ಮಾಣ ಸಹಾಯಾರ್ಥವಾಗಿ ಜ.17 ರಂದು ಸಂಜೆ 5 ಗಂಟೆಗೆ ನೂತನ ಶಾಲೆಯ ಆವರಣದಲ್ಲಿ “ಉಪಾಸನಂ” ಸಂಗೀತ (Sangeetha) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮನಸ್ವಿನೀ ವಿದ್ಯಾನಿಲಯದ ಅಧ್ಯಕ್ಷೆ ರೇಖಾ ಭಟ್‌ ಕೋಟೆಮನೆ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಶಿಕ್ಷಣದ ಜತೆಗೆ ಗುರುಕುಲ ಮಾದರಿ ಪದ್ಧತಿಯನ್ನು ಅಳವಡಿಸಿಕೊಂಡು ಸಂಸ್ಕಾರಯುತ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೆ ಸ್ಥಳೀಯವಾಗಿ ಸಿಗುವಂತಾಗಬೇಕು, ದೂರದ ಪಟ್ಟಣಗಳಿಗೆ ಓಡಾಡುವ ತೊಂದರೆಯಲ್ಲಿ ಮಕ್ಕಳು ಸಿಲುಕಬಾರದೆಂಬ ಧ್ಯೇಯದೊಂದಿಗೆ ಮನಸ್ವಿನೀ ವಿದ್ಯಾನಿಲಯ ಶಿಕ್ಷಣ ಸಂಸ್ಥೆಯು ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿ ಸ್ಥಾಪಿತವಾಗಿದ್ದು, 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

ಪ್ರಸ್ತುತ 130 ವಿದ್ಯಾರ್ಥಿಗಳು ಮತ್ತು 10 ಶಿಕ್ಷಕರೊಂದಿಗೆ ಬಾಡಿಗೆ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಶಾಲೆಗೆ ಸ್ವಂತ ಕಟ್ಟಡದ ಅನಿವಾರ್ಯತೆ ಇದೆ. ಈಗಾಗಲೇ ಶಾಲೆಯ ಹೆಸರಿನಲ್ಲಿ ಸ್ವಂತ ಜಾಗ ಖರೀದಿಸಿದ್ದು, ಸುಸಜ್ಜಿತ ಕಟ್ಟಡ ನಿರ್ಮಿಸಿ, ಮಕ್ಕಳ ಕಲಿಕೆ ಅನಿವಾರ್ಯವಾಗಿರುವ ಆಟ, ಪಾಠೋಪಕರಣ, ಗ್ರಂಥಾಲಯ ಇತ್ಯಾದಿಗಳ ಅಗತ್ಯತೆಯನ್ನು ಪೂರೈಸಲು ಸಹಾಯಾರ್ಥವಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆಗೆ ಬಂತು ವಿಶೇಷ ಡೋಲು; ಏನಿದರ ವಿಶೇಷ?

ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕಿ ಗೌರಿ ಪಠಾರೆ ಮುಂಬೈ, ಅಂತಾರಾಷ್ಟ್ರೀಯ ಕೊಳಲು ವಾದಕ ಪಂ. ಪ್ರವೀಣ್‌ ಗೋಡಖಿಂಡಿ, ಸಂವಾದಿನಿಯಲ್ಲಿ ಪಂ. ಸುಧೀರ್‌ ನಾಯ್ಕ ಮುಂಬೈ, ತಬಲಾದಲ್ಲಿ ಪಂ. ರಾಜೇಂದ್ರ ನಾಕೋಡ್‌ ಮತ್ತು ಕಿರಣ್‌ ಗೋಡಖಿಂಡಿ ಭಾಗವಹಿಸಲಿದ್ದಾರೆ. ಜತೆಗೆ ಖ್ಯಾತ ಹಿನ್ನೆಲೆ ಗಾಯಕ ಸರಿಗಮಪ ಖ್ಯಾತಿಯ ಸಂಜಿತ್‌ ಹೆಗಡೆ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮಕ್ಕೆ 1000 ರೂ. ಹಾಗೂ 500 ರೂ. ಪ್ರವೇಶ ದರ ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಶಾಲೆ/ಕಾಲೇಜಿನ ಗುರುತಿನ ಚೀಟಿಯೊಂದಿಗೆ ರಿಯಾಯಿತಿ ದರದಲ್ಲಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448423234/ 8660361864ಗೆ ಸಂಪರ್ಕಿಸಬಹುದಾಗಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಲೆಯ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿ ವಿನಂತಿ ಎಂದು ತಿಳಿಸಿದರು.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಆಗಮನ; ದ್ವಿತೀಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಈ ಸಂದರ್ಭದಲ್ಲಿ ಪ್ರಮುಖರಾದ ನಾಗಭೂಷಣ ಹೆಗಡೆ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹೆಗಡೆ, ಶಿಕ್ಷಕಿ ನೇತ್ರಾವತಿ ಭಟ್‌ ಉಪಸ್ಥಿತರಿದ್ದರು.

Exit mobile version