Site icon Vistara News

ವಿದ್ಯಾರ್ಥಿಯ ಮಾನಸಿಕ ವಿಕಾಸವೆ ಶಿಕ್ಷಣದ ಉದ್ದೇಶ: ಸಾಹಿತಿ ಶ್ರೀಧರ ಬಳಗಾರ

ಶ್ರೀಧರ ಬಳಗಾರ

ಯಲ್ಲಾಪುರ: ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಪ್ರೇರಣಾ ಶಿಬಿರ ಮತ್ತು ಸಂವಹನ ಕಾರ್ಯಕ್ರಮ ಪದವಿಪೂರ್ವ ಕಾಲೇಜಿನ ಆವಾರಣದಲ್ಲಿ ಇತ್ತೀಚೆಗೆ ನಡೆಯಿತು. ಕನ್ನಡ ಸಾಹಿತ್ಯದ ಮೇರು ಸಾಹಿತಿ, ವಿಮರ್ಶಕ ಶ್ರೀಧರ ಬಳಗಾರ ಅವರು ಶಿಕ್ಷಣ ಮತ್ತು ಉಪನ್ಯಾಸಕರ ಹೊಣೆ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಯ ಪೂರ್ವ ಕಲಿಕೆಯನ್ನು ಅರಿಯುತ್ತಾ ಪಠ್ಯ ಸಂವಹನ ಮಾಡಬೇಕೆಂದು ಅವರು ಉಪನ್ಯಾಸಕರಿಗೆ ಸಲಹೆ ನೀಡಿದರಲ್ಲದೆ, ವಿದ್ಯಾರ್ಥಿಯ ಮಾನಸಿಕ ವಿಕಾಸವೆ ಶಿಕ್ಷಣದ ಉದ್ದೇಶವಾಗಿದೆ ಎಂದು ವಿವರಿಸಿದರು.

ಶ್ರೀಧರ ಬಳಗಾರ

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಠ್ಯ, ಶಿಕ್ಷಕ, ವಿದ್ಯಾರ್ಥಿ, ಮೌಲ್ಯಮಾಪನ, ಮೊದಲಾದ ಕ್ಷೇತ್ರಗಳ ಪಾರಂಪರಿಕ ಮತ್ತು ಆಧುನಿಕ ಬೋಧನಾ ವಿಷಯಗಳ ಬಗೆಗೆ ಉಪನ್ಯಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆಯವರ ಶೈಕ್ಷಣಿಕ ಆದರ್ಶಗಳು ಉಪನ್ಯಾಸಕರಿಂದ ಈಡೇರಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್, ಸಂಯೋಜಕರಾದ ಪ್ರಸನ್ನ ಭಟ್ ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಶಿಬಿರದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮವನ್ನು ಕವಿತಾ ಹೆಬ್ಬಾರ ನಿರೂಪಿಸಿದರೆ, ವಂದನಾರ್ಪಣೆಯನ್ನು ನಾಗರಾಜ ಹೆಗಡೆ ನಡೆಸಿಕೊಟ್ಟರು. ವಿನಾಯಕ ಭಟ್ ಈ ಪ್ರೇರಣಾ ಶಿಬಿರ ಆಯೋಜಕರಾಗಿದ್ದರು.

ವಿವೇಕಾನಂದರ ಕುರಿತು ಉಪನ್ಯಾಸ

ಈ ಸಂದರ್ಭದಲ್ಲಿ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ನಡೆಸಲಾಯಿತು. ಶ್ರೀಧರ್ ಬಳಗಾರ ರವರು ವಿವೇಕಾನಂದರ ಶೈಕ್ಷಣಿಕ ಕೊಡುಗೆಗಳು ವಿಷಯವಾಗಿ ಉಪನ್ಯಾಸವನ್ನು ಬಿ ಇಡಿ. ತರಗತಿಯ ವಿದ್ಯಾರ್ಥಿಗಳಿಗೆ ನೀಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಂಕರನಾರಾಯಣ ಭಟ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಉಪಸ್ಥಿತರಿದ್ದರು.

ಇದನ್ನೂ ಓದಿ|ಯಲ್ಲಾಪುರ: ವಿಶ್ವದರ್ಶನ ಮಹಾವಿದ್ಯಾಲಯದಿಂದ ಶ್ರಮದಾನ

Exit mobile version