Site icon Vistara News

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

Yallapur Vishwadarshana Group of institutions performed well in SSLC Result 2024

ಯಲ್ಲಾಪುರ: 2023-24ನೇ ಸಾಲಿನ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ (SSLC Result 2024) ಪ್ರಕಟಗೊಂಡಿದ್ದು, ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಮೂರು ಪ್ರೌಢಶಾಲೆಗಳು ಉತ್ತಮ ಸಾಧನೆ ತೋರಿವೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.98.48 ಫಲಿತಾಂಶ ದಾಖಲಿಸಿದ್ದು, ಶಾಲೆಯ ವಿದ್ಯಾರ್ಥಿನಿ ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅದೇ ರೀತಿ ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ. ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯುೂ ಕೂಡ ಉತ್ತಮ ಸಾಧನೆ ಮಾಡಿದ್ದು, ಶೇ.98.24 ಫಲಿತಾಂಶ ಪಡೆದಿದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಈ ಕುರಿತು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ ಅವರು ಸಂತಸ ವ್ಯಕ್ತಪಡಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಮೂಹವು ನಿರಂತರವಾಗಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಪದವಿಪೂರ್ವ ಕಾಲೇಜು ಇದ್ದು, ಇಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಹತ್ತನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಸ್ವಂತ ಊರಿನಲ್ಲಿಯೇ ಮುಂದಿನ ಶಿಕ್ಷಣಕ್ಕಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ: ಶೇ.98.48 ಫಲಿತಾಂಶ

ಪ್ರಣತಿ ವಿ. ಮೆಣಸುಮನೆ 625ಕ್ಕೆ 620 ಅಂಕ ಗಳಿಸಿ ಶೇ. 99.20 ಫಲಿತಾಂಶದೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಶಾಲೆಗೆ ಪ್ರಥಮ ಸ್ಥಾನ, ಸಿಂಚನಾ ಎಸ್. ಭಟ್ಟ 615 ಅಂಕ ಗಳಿಸಿ ಶೇ.98.40 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, ತೇಜಸ್ ಎಸ್. ಹೆಗಡೆ 609 ಅಂಕ ಗಳಿಸಿ ಶೇ.97.44 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 66 ವಿದ್ಯಾರ್ಥಿಗಳಲ್ಲಿ 33 ಡಿಸ್ಟಿಂಕ್ಷನ್‌ನಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ದರ್ಜೆ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ: ಶೇ. 100% ಫಲಿತಾಂಶ ಸಾಧನೆ

ತಾಲೂಕಿನ ಇಡಗುಂದಿಯಲ್ಲಿರುವ ವಿಶ್ವದರ್ಶನ ಪ್ರೌಢಶಾಲೆಯು ಎಂಟನೇ ಬಾರಿಗೆ ನೂರಕ್ಕೆ ನೂರು ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ 35 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಣೇಶ ಶಾಂತಾರಾಮ ದೇಸಾಯಿ 587 (93.92%) ಪ್ರಥಮ ಸ್ಥಾನ, ನಂದಿತಾ ಮಹೇಶ ತಾಮ್ಸೆ 583 (93.28%) ದ್ವಿತೀಯ ಸ್ಥಾನ ಹಾಗೂ ಸುಬ್ರಹ್ಮಣ್ಯ ನಾರಾಯಣ ಭಟ್ಟ 571 (91.36%) ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ, ಯಲ್ಲಾಪುರ: ಶೇ. 98.24 ಫಲಿತಾಂಶ

ಅನನ್ಯ ನಾಗೇಶ ಹೆಗಡೆ 579 ಅಂಕ ಗಳಿಸಿ ಪ್ರಥಮ ಸ್ಥಾನ, ವೇದಶ್ರೀ ವೆಂಕಟರಮಣ ಭಟ್ಟ 570 ಅಂಕ ಗಳಿಸಿ ದ್ವಿತೀಯ ಸ್ಥಾನ, ಪವನ್ ಚಂದ್ರಕಾಂತ ಮರಾಠಿ 563 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಒಟ್ಟು 57 ವಿದ್ಯಾರ್ಥಿಗಳಲ್ಲಿ 10 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ 33 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 3 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Exit mobile version