ಶಿರಸಿ: ಚಿಕ್ಕ ವಯಸ್ಸಿನಲ್ಲಿಯೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿದ ಪ್ರತಿಭೆಗಳಿಗೆ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ನೀಡುವ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರವನ್ನು ಜಿಲ್ಲೆಯ ಯಲ್ಲಾಪುರ ಮೂಲದ ಪ್ರತಿಭೆ ಶಮಾ ಭಾಗ್ವತ್ ಅವರಿಗೆ ಭಾನುವಾರ (ಮಾರ್ಚ್ 2) ಪ್ರದಾನ (Yellapur News) ಮಾಡಲಾಯಿತು.
ಇದನ್ನೂ ಓದಿ: Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ
ಯಲ್ಲಾಪುರದಲ್ಲಿ ಸೆಲ್ಕೋದ ಕ್ಷೇತ್ರೀಯ ಅಧಿಕಾರಿ ಮಂಜುನಾಥ ಭಾಗವತ್ ಹಾಗೂ ಉಪನ್ಯಾಸಕಿ, ಭರತನಾಟ್ಯ ಕಲಾವಿದೆ ಶ್ವೇತಾ ಭಟ್ಟ ಕಾನಸೂರು ಅವರ ಪುತ್ರಿ ಈ ಶಮಾ ಭಾಗ್ವತ್. ಈಕೆ ಕೂಡ ತಾಯಿಯಂತೆಯೇ ಭರತನಾಟ್ಯ ಕಲಾವಿದೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ನೃತ್ಯದ ಮೂಲಕ ಹಲವಾರು ವೇದಿಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಶಮಾ ಅವರು ಚಿತ್ರದುರ್ಗದಲ್ಲಿ ಏಳನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅಖಿಲ ಹವ್ಯಕ ಮಹಾಸಭಾ ಸಂಸ್ಥಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಹವ್ಯಕ ಪಲ್ಲವ ಪುರಸ್ಕಾರ ಪ್ರದಾನಿಸಲಾಗಿದೆ. ಸಂಘಟನೆಯ ಅಧ್ಯಕ್ಷರು ಹಾಗೂ ಪ್ರಸಿದ್ಧ ವೈದ್ಯರಾಗಿರುವ ಡಾ. ಗಿರಿಧರ ಖಜೆ, ಉಪಾಧ್ಯಕ್ಷರಾಗಿರುವ ಆರ್.ಎಂ.ಹೆಗಡೆ ಬಾಳೆಸರ, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಎಂ.ಕೆ. ಭಾಸ್ಕರರಾವ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿದ್ದರು.
ಇದನ್ನೂ ಓದಿ : Havyaka Awards : ಪೆರುವೋಡಿ, ಲಕ್ಷ್ಮೀಶ ಸೋಂದಾ, ಜಿ.ಎಸ್. ಹೆಗಡೆ ಸಹಿತ 7 ಮಂದಿ ಸಾಧಕರಿಗೆ ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ