ಯಲ್ಲಾಪುರ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ 23 ವರ್ಷ ವಿಶೇಷ ಕರ್ತವ್ಯ ಸಲ್ಲಿಸಿರುವ ಯಲ್ಲಾಪುರ ತಾಲೂಕಿನ ಕಿರವತ್ತಿಯ (Yellapur News) ಸಂಜಯ್ ಪೋಳ ಅವರು ಕರ್ನಾಟಕ ಸರ್ಕಾರದ 2022ನೇ ಸಾಲಿನ ಮುಖ್ಯಮಂತ್ರಿಯವರ ಪದಕವನ್ನು ಪಡೆದುಕೊಂಡಿದ್ದಾರೆ.
ಸಂಜಯ್ ಪೋಳ ಅವರು ಪ್ರಸ್ತುತ ಪೊಲೀಸ್ ಇಲಾಖೆಯ ಆರೋಗ್ಯ ಭಾಗ್ಯ ಯೋಜನೆಯ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿನ ಮೊದಲ ಮತ್ತು ಎರಡನೇ ಅಲೆಯಲ್ಲಿ ಪರಿಣಾಮಕಾರಿ ಜವಾಬ್ದಾರಿ ನಿರ್ವಹಿಸಿದ ಅವರ ಶ್ರಮವನ್ನು ಗುರುತಿಸಿ ಈ ಪದಕವನ್ನು ನೀಡಲಾಗಿದೆ.
ಇದನ್ನೂ ಓದಿ: Yellapur News : ಯಲ್ಲಾಪುರದ ಭರತನಾಟ್ಯ ಕಲಾವಿದೆ ಶಮಾ ಭಾಗ್ವತ್‌ಗೆ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರ
ಮುಖ್ಯಮಂತ್ರಿ ಅವರ ಪದಕಕ್ಕೆ ಭಾಜನರಾದ ಸಂಜಯ್ ಪೋಳ ಮೂಲತಃ ಯಲ್ಲಾಪುರದ ಕಿರವತ್ತಿಯವರಾಗಿದ್ದು, ಹುಬ್ಬಳ್ಳಿ, ಧಾರವಾಡ ನಗರ, ಮಂಗಳೂರು, ಬೆಳಗಾವಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.