Site icon Vistara News

ಯಲ್ಲಾಪುರ: ವಿಶ್ವದರ್ಶನ ಮಹಾವಿದ್ಯಾಲಯದಿಂದ ಶ್ರಮದಾನ

ಯಲ್ಲಾಪುರ

ಯಲ್ಲಾಪುರ: ಇಲ್ಲಿಯ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್.ಘಟಕದ ವತಿಯಿಂದ ಶನಿವಾರ ಪಟ್ಟಣದಲ್ಲಿ ಶ್ರಮದಾನ ನಡೆಯಿತು. ಪಟ್ಟಣದ ನಾಯಕನ ಕೆರೆ ಸಮೀಪದ ಶಾರದಂಬಾ ದೇವಸ್ಥಾನದ ಹತ್ತಿರದ ಪಾದಚಾರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

ವಿದ್ಯಾರ್ಥಿಗಳು ಅಲ್ಲಿ ಬೆಳೆದ ಅನುಪಯುಕ್ತ ಗಿಡ, ಕಸಕಡ್ಡಿಗಳನ್ನು ತೆಗೆದು ಜಾಗವನ್ನು ಸ್ವಚ್ಛಗೊಳಿಸಿದರು. ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಈ ಶ್ರಮದಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಯಕ್ತಿಕ ಸ್ವಚತೆ ಎಷ್ಟು ಮುಖ್ಯವೋ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯೂ ಅಷ್ಟೇ ಮುಖ್ಯ. ಸಮಾಜದಲ್ಲಿ ಪ್ರತಿಯೊಬ್ಬರೂ ಅವರದೇ ಆದ ಜವಾಬ್ದಾರಿ ಹಾಗೂ ಹೊಣೆ ಹೊಂದಿದ್ದು ಅದನ್ನು ಅರಿತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಾಗ ಸುಂದರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು.

ಶ್ರಮದಾನ ಮಾಡುತ್ತಿರುವ ವಿದ್ಯಾರ್ಥಿಗಳು

ಎಲ್ಲರೂ ಸ್ವಚ್ಛ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ನರಸಿಂಹ ಕೋಣೆಮನೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ಎಲ್ ಭಟ್, ಎನ್ ಎಸ್ ಎಸ್ ಘಟಕದ ಸಂಯೋಜಕ ಸೀತಾರಾಮ್ ಗೌಡ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version