ಬೆಂಗಳೂರು: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ. ಕಥಾಸ್ಪರ್ಧೆಯಲ್ಲಿ (Utthana Katha Spardhe) ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐವರಿಗೆ ಮೆಚ್ಚುಗೆಯ ಬಹುಮಾನ ತಲಾ 2 ಸಾವಿರ ರೂ. ಇರಲಿದೆ.
ಕಥಾಸ್ಪರ್ಧೆಯ ಮಾರ್ಗಸೂಚಿ
- ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು.
- ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
- ಬಹುಮಾನಿತ ಕಥೆ ‘ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.
- ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
- ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com
- ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.
- ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಲೇಖಕರು ಮೂಲಕಥೆಯ ಇನ್ನೊಂದು ಪ್ರತಿಯನ್ನು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
- ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.
- ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ‘ಉತ್ಥಾನ’ದ್ದು.
- ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ‘ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಇದನ್ನೂ ಓದಿ | Nobel Peace Prize: ಇರಾನ್ನ ಮಹಿಳಾ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ
ಕಥೆ ಎಲ್ಲಿಗೆ ತಲುಪಿಸಬೇಕು?
ಕಥೆಗಳನ್ನು ಅಕ್ಟೋಬರ್ 10ರೊಳಗೆ ವಿಳಾಸ: ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023ʼ ಸಂಪಾದಕರು, ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು ಇಲ್ಲಿಗೆ ತಲುಪಿಸಬೇಕು. ಮೊಬೈಲ್ 77954 41894 ಇ-ಮೇಲ್: utthanakathaspardhe@gmail.com