Site icon Vistara News

Utthana Essay Competition 2024: ಉತ್ಥಾನ ಪ್ರಬಂಧ ಸ್ಪರ್ಧೆಗೆ ಬರಹ ಕಳುಹಿಸಿ; 10,000 ರೂ. ಬಹುಮಾನ ಪಡೆಯಿರಿ!

Utthana Essay Competition 2024

ಬೆಂಗಳೂರು: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ “ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಜಗತ್ತು” ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು (Utthana Essay Competition 2024) ಆಯೋಜಿಸಲಾಗಿದೆ.

ʼಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2024ʼ ರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ಅವರು ಬಿಡುಗಡೆ ಮಾಡಿದರು. ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್‌ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.

ಇದನ್ನೂ ಓದಿ: Kali Bridge Collapse: ಕಾಳಿನದಿ ಸೇತುವೆ ಕುಸಿತ; ಉ.ಕ ಡಿಸಿಯಿಂದ ಮಾಹಿತಿ ಪಡೆದ ಸಿಎಂ

ಉತ್ಥಾನ ಮಾಸಪತ್ರಿಕೆಯು ಕಳೆದ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನಲ್ಲಿ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಸ್ಪರ್ಧೆಯ ನಿಯಮಗಳು

ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪ್ರಬಂಧವು ಕನ್ನಡ ಭಾಷೆಯಲ್ಲಿರಬೇಕು. ಪ್ರಬಂಧವು 1500 ಪದಗಳು ಮೀರದಂತೆ ಇರಲಿ. ಪ್ರಬಂಧವನ್ನು ಪೋಸ್ಟ್ ಮೂಲಕ ಅಥವಾ ಇಮೇಲ್ ಮೂಲಕ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು. ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು. ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ. ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜತೆಗೆ ಭಾವಚಿತ್ರವೂ ಇರಬೇಕು.

ಪ್ರಬಂಧವನ್ನು ನುಡಿ/ಯೂನಿಕೋಡ್ ತಂತ್ರಾಶದಲ್ಲಿ ಸಿದ್ಧಪಡಿಸಿ (ಪಿಡಿಎಫ್‌ ಮತ್ತು ವರ್ಡ್‌ ಫೈಲ್‌ ಎರಡನ್ನೂ) utthanacompetition@gmail.com ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು. ಜೆರಾಕ್ಸ್‌ /ಫೋಟೋ ಪಿಡಿಎಫ್‌ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ. ಪ್ರಬಂಧ ತಲುಪಲು ಅಕ್ಟೋಬರ್ 10 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಹುಮಾನಗಳ ವಿವರ

ಮೊದಲ ಬಹುಮಾನ: ರೂ. 10,000/-
ಎರಡನೆಯ ಬಹುಮಾನ: ರೂ. 7,000 /-
ಮೂರನೆಯ ಬಹುಮಾನ: ರೂ. 5,000/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,000/-

ಇದನ್ನೂ ಓದಿ: Kannada New Movie: ʼಆಪರೇಷನ್ ಕೊಂಬುಡಿಕ್ಕಿʼ ಚಿತ್ರ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ

ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ

ಸಂಪಾದಕರು, ‘ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2024
‘ಕೇಶವ ಶಿಲ್ಪ’, ಕೆಂಪೇಗೌಡ ನಗರ ಬೆಂಗಳೂರು –04, ಇ-ಮೇಲ್: utthanacompetition@gmail.com ದೂರವಾಣಿ: 77954 41894

Exit mobile version