ಗದಗ: ದೇಶ ಕಂಡ ಅಪ್ರತಿಮ ರಾಜಕಾರಣಿ, ನಿಜಾರ್ಥದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು (Vajapayee Birthday) ರಾಷ್ಟ್ರಾದ್ಯಂತ ಆಚರಿಸಲಾಗಿದೆ. ಗದಗದಲ್ಲಿ ಅಟಲ್ ಯಾತ್ರೆಯ ಮೂಲಕ ಮಹಾ ನಾಯಕನನ್ನು ನೆನಪು ಮಾಡಿಕೊಳ್ಳಲಾಯಿತು.
ಬಿಜೆಪಿ ಮುಖಂಡರಾಗಿರುವ ನಾಗೇಶ್ ಹುಬ್ಬಳ್ಳಿ ಅವರ ಸಾರಥ್ಯದಲ್ಲಿ ಅಟಲ್ ಯಾತ್ರೆಯನ್ನು ಆಯೋಜಿಸಲಾಗಿತ್ತು. ಹಿರಿಯ ಬಿಜೆಪಿ ನಾಯಕರು ಅಟಲ್ ಯಾತ್ರೆಗೆ ಚಾಲನೆ ನೀಡಿದರು.
ಗದಗ ನಗರದ ತೋಂಟದಾರ್ಯ ಮಠದ ಆವರಣದಿಂದ ಅಟಲ್ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಕ್ಷೇತ್ರದ ಹೆಚ್ಚಿನ ಕಡೆಗಳಲ್ಲಿ ಅಟಲ್ ಯಾತ್ರೆ ಸಂಚರಿಸಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಉತ್ತಮ ಆಡಳಿತ, ದೇಶಭಕ್ತಿಯನ್ನು ನೆನಪಿಸಿಕೊಂಡಿರುವ ನಾಗೇಶ್ ಹುಬ್ಬಳ್ಳಿ ಇಂಥ ನಾಯಕರು ಬಲು ಅಪರೂಪ ಎಂದರು. ಅವರ ಆಡಳಿತ ವೈಖರಿ, ದೇಶಪ್ರೇಮ ಮತ್ತು ಎಲ್ಲರೊಂದಿಗೆ ಬೆರೆತು ಬಾಳುವ ಗುಣಗಳು ಅವರನ್ನು ಸದಾ ಕಾಲ ನೆನೆಯುವಂತೆ ಮಾಡಿದೆ ಎಂದು ಹೇಳಿದರು.
ನಾಗೇಶ್ ಹುಬ್ಬಳ್ಳಿ ಅವರ ಸಾರಥ್ಯದ ಯಾತ್ರೆಗೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಎಲ್ಲ ನಾಯಕರೂ ವಾಜಪೇಯಿ ಅವರ ಗುಣಗಾನ ಮಾಡಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್ ಜೀ: ಇಂದು ಅವರ ಹುಟ್ಟುಹಬ್ಬ