ಬೆಂಗಳೂರು: ಹೊಸ ವರ್ಷದಂದು ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್ ಕೊಟ್ಟಿದೆ. ವೋಲ್ವೋ ಪ್ರಯಾಣಿಕರ (Vajra bus) ಜೇಬಿಗೆ ಕತ್ತರಿ ಹಾಕಲು ನಿಗಮ ಹೊರಟಿದ್ದು, ಭಾನುವಾರ ಪಾಸ್ ತೋರಿಸಿ ಓಡಾಡುವ ಪ್ರಯಾಣಿಕರಿಗೂ ಬಿಎಂಟಿಸಿ ಬ್ರೇಕ್ ಹಾಕಿದೆ.
ಕೋವಿಡ್‌ನಿಂದಾಗಿ ವೋಲ್ವೋ ಬಸ್‌ಗಳಿಗೆ (Vajra bus) ಪ್ರಯಾಣಿಕರು ಬರುತ್ತಿಲ್ಲ. ದುಬಾರಿ ವೋಲ್ವೋ ಬಸ್‌ಗಳನ್ನು ಸುಮ್ಮನೆ ನಿಲ್ಲಿಸುವ ಬದಲು, ಜನರಿಗೆ ಅನುಕೂಲವಾಗಲೆಂದು ಟಿಕೆಟ್ ದರ ಕಡಿಮೆ ಮಾಡಿ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಲಾಗಿತ್ತು. ಜನ ಕೂಡ ವೋಲ್ವೋದತ್ತ ಮುಖ ಮಾಡಿದ್ದರು. ಆದರೆ ಅಧಿಕಾರಿಗಳ ಈ ಐಡಿಯಾ ಕ್ಲಿಕ್ ಆಗುತ್ತಿದ್ದಂತೆ ವೋಲ್ವೋ ಬಸ್ ದರವನ್ನು ಏರಿಸಿದೆ.
ಇಂಧನ ಬೆಲೆ ಏರಿಕೆ ಹಿನ್ನಲೆ ನಷ್ಟದ ಭಾರ ಹೆಚ್ಚಾಗುತ್ತಿದೆ ಎಂಬ ಕಾರಣ ನೀಡಿ ಬಿಎಂಟಿಸಿ ವೋಲ್ವೋ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಮುಖ್ಯವಾಗಿ ವೋಲ್ವೋ ಪಾಸುಗಳ ದರವನ್ನು ಶೇಕಡಾ 20 ರಷ್ಟು ಏರಿಕೆ ಮಾಡಿದೆ. ಇದರ ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿ ಆಗುತ್ತಿದೆ.
ದರ ಏರಿಕೆ ಎಷ್ಟು?
ಪ್ರಸ್ತುತ ವೋಲ್ವೋ ಮಾಸಿಕ ದರ = 1428 + ಜಿಎಸ್‌ಟಿ 72 = ಒಟ್ಟು 1500 ರೂಪಾಯಿ
ಹೊಸ ಪರಿಷ್ಕೃತ ವೋಲ್ವೋ ಪಾಸಿನ ದರ 1714.29 ಪೈಸೆ + ಜಿಎಸ್‌ಟಿ 85.71 = ಒಟ್ಟು 1800 ರೂಪಾಯಿ
ವಜ್ರ ವೋಲ್ವೋ ಡೈಲಿ ಪಾಸ್ ದರ ಎಷ್ಟು?
ಪ್ರಸ್ತುತ ವಜ್ರ ದೈನಿಕ ಪಾಸಿನ ದರ 95 + ಜಿಎಸ್‌ಟಿ 5 = 100 ರೂಪಾಯಿ ಇತ್ತು
ಪರಿಷ್ಕೃತ ದರ- 114.29 + ಜಿಎಸ್‌ಟಿ 5.21 = 120 ರೂಪಾಯಿಗೆ ಹೆಚ್ಚಳವಾಗಿದೆ.
ಪಾಸ್ ಮಾತ್ರವಲ್ಲದೆ ಟಿಕೆಟ್ ದರದಲ್ಲೂ ಶೇಕಡಾ 20ರಷ್ಟು ಏರಿಕೆ ಮಾಡಲಾಗಿದ್ದು, ವೋಲ್ವೋ ಪ್ರಯಾಣಿಕರಿಗೆ ದೊಡ್ಡ ಹೊರೆ ಬೀಳಲಿದೆ. ಮುಂದುವರಿದು, ಸಾಮಾನ್ಯ ಮಾಸಿಕ ಪಾಸುದಾರರು ಮತ್ತು ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರಗಳಂದು ಮಾನ್ಯತಾ ಪಾಸಿನೊಂದಿಗೆ ವಜ್ರ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಲಾಗಿದ್ದ ಸೌಲಭ್ಯವನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ | Job News | ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿಗೆ ಆಯ್ಕೆ; ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ