Site icon Vistara News

Namma Metro: 721 ಮೀ. ಮೆಟ್ರೋ ಸುರಂಗ ಕೊರೆದು ಹೊರಬಂದ ವಮಿಕ

Tunnel boring machine Vamika

ಬೆಂಗಳೂರು: ಮೆಟ್ರೊ ರೈಲು ಮಾರ್ಗಕ್ಕಾಗಿ 721 ಮೀ. ಸುರಂಗವನ್ನು ಯಶಸ್ವಿಯಾಗಿ ಕೊರೆದು ವಮಿಕ (ಸುರಂಗ ಕೊರೆಯುವ ಯಂತ್ರ) ಹೊರಬಂದಿದೆ. ಏಪ್ರಿಲ್‌ 21ರಂದು ಲಕ್ಕಸಂದ್ರ ನಿಲ್ದಾಣದಿಂದ ಸುರಂಗ ಕೊರೆಯಲು ಪ್ರಾರಂಭಿಸಿದ್ದ ವಮಿಕ, 132 ದಿನಗಳ ಬಳಿಕ ಲ್ಯಾಂಗ್ ಫೋರ್ಡ್ ಟೌನ್ ನಿಲ್ದಾಣದ ಬಳಿ (Namma Metro) ಬುಧವಾರ ಹೊರಬಂದಿದೆ.

ಈ ಹಿಂದೆ ವಮಿಕ (Vamika Tunnel boring machine) ಸೌತ್ ರ‍್ಯಾಂಪ್ ಮತ್ತು ಡೈರಿ ಸರ್ಕಲ್‌ ಮೆಟ್ರೋ ಸುರಂಗ ನಿಲ್ದಾಣಗಳ ನಡುವೆ 613.2 ಮೀ ಸುರಂಗ ಕೊರೆಯುವ ಕಾರ್ಯಾಚರಣೆ ನಡೆಸಿತ್ತು. ಹಾಗೆಯೇ ಡೈರಿ ಸರ್ಕಲ್‌ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ ಸುರಂಗ ಕಾಮಗಾರಿ ಪೂರ್ಣಗೊಳಿಸಿತ್ತು. ಇದರೊಂದಿಗೆ ಹಂತ-2 ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ ಒಟ್ಟು 17.62 ಕಿ.ಮೀ ಕಾಮಗಾರಿ ಪೂರ್ಣವಾಗಿದೆ.

ರೀಚ್-6ರ ಸುರಂಗ ಮಾರ್ಗದಲ್ಲಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ (Tunnel boring machine) 6 ಟಿಬಿಎಂಗಳು ಸುರಂಗ ಕಾಮಗಾರಿ ಪೂರ್ಣಗೊಳಿಸಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮಾಹಿತಿ ನೀಡಿದೆ.

ಇದನ್ನೂ ಓದಿ | Aditya L1 Mission: ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಮಿಷನ್‌ ರೆಡಿ; ತಾಲೀಮು ಅಂತ್ಯ, ಉಡಾವಣೆಯೊಂದೇ ಬಾಕಿ

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಪೀಕ್‌ ಅವರ್‌ನಲ್ಲಿ ಮೆಜೆಸ್ಟಿಕ್‌ನಿಂದ Extra ರೈಲು ಹೊರಡುತ್ತೆ!

ಬೆಂಗಳೂರು: ಇದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ (Good News for Metro Commuters) ! ನೀವು ಮೆಜೆಸ್ಟಿಕ್‌ಗೆ ಹೋಗಿ ಅಲ್ಲಿಂದ ಎಂ.ಜಿ. ರೋಡ್‌ (Majestic to MG Road Extra service) ಕಡೆಗೆ ಹೋಗುವವರಾಗಿದ್ದರೆ ಖಂಡಿತವಾಗಿಯೂ ಖುಷಿಪಡುವ ಸುದ್ದಿಯನ್ನು ನೀಡಿದೆ ಬಿಎಂಆರ್‌ಸಿಎಲ್‌ (BMRCL).

ನಿಮಗೇ ತಿಳಿದಿರುವ ಹಾಗೆ, ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ (Majestic Metro Station) ಬೆಳಗ್ಗಿನ ಅವಧಿಯಲ್ಲಿ ವಸ್ತುಶಃ ಬಿಎಂಟಿಸಿ ಬಸ್‌ ಸ್ಟಾಂಡ್‌ ತರ ಆಗಿಬಿಡುತ್ತದೆ, ಜನ ಜಾತ್ರೆಯೇ ನೆರೆಯುತ್ತದೆ. ಪ್ರತಿ ಐದು ನಿಮಿಷಕ್ಕೊಮ್ಮೆ ಒಂದು ರೈಲು ಓಡಾಡಿದರೂ ಸಾಲದಷ್ಟು ಪ್ರಯಾಣಿಕರು ನೆರೆದಿರುತ್ತಾರೆ. ಪೀಕ್‌ ಅವರ್‌ನ ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ಮೆಟ್ರೊ ಒಂದು ಹೊಸ ಪ್ಲ್ಯಾನ್‌ ಮಾಡಿದೆ. ಅದುವೇ ವಾರದ ದಿನಗಳಲ್ಲಿ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ರೈಲು ಓಡಾಟ.

ಹೌದು, ಸೆಪ್ಟೆಂಬರ್ 1ರಿಂದ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ನೀಡಲು ಬಿಎಂಆರ್‌ಸಿಎಲ್‌ ನಿರ್ಧಾರ ಮಾಡಿದೆ. ಇದು ಸದ್ಯಕ್ಕೆ ಜಾರಿಯಾಗುತ್ತಿರುವುದು ನೇರಳೆ ಮಾರ್ಗದಲ್ಲಿ.

ಹಾಗಂತ ಇದು ಇಡೀ ಮಾರ್ಗದುದ್ದಕ್ಕೂ ಇರುವುದಿಲ್ಲ. ಮೆಜೆಸ್ಟಿಕ್‌ ನಿಲ್ದಾಣದಿಂದ ಎಂ.ಜಿ. ರೋಡ್‌ವರೆಗೆ ಹೆಚ್ಚುವರಿ ಕಾರ್ಯಾಚರಣೆ ರೈಲುಗಳನ್ನು ಸೇವೆಗೆ ಇಳಿಸಲು ನಿರ್ಧರಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಪೀಕ್‌ ಅವರ್‌ನಲ್ಲಿ ಈ ಹೆಚ್ಚುವರಿ ಟ್ರಿಪ್ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ | Weather Report : ನಾಳೆ ಹಲವೆಡೆ ತುಂತುರು ಮಳೆ

ಹೆಚ್ಚುವರಿ ರೈಲಿನಿಂದ ಯಾರಿಗೆ ಅನುಕೂಲ?

ಮೆಜೆಸ್ಟಿಕ್‌ನಿಂದ ಎಂ.ಜಿ. ರೋಡ್‌ವರೆಗೆ ಹೆಚ್ಚುವರಿ ರೈಲು ಬಿಡುವುದರಿಂದ ಹಲವರಿಗೆ ಅನುಕೂಲವಾಗಲಿದೆ.

  1. ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ ಇಲ್ಲವೇ ನಾಗಸಂದ್ರ ಕಡೆಯಿಂದ ಬಂದು ಮೆಜೆಸ್ಟಿಕ್‌ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಬದಲಾವಣೆ ಮಾಡುವವರಿಗೆ ಇದು ತುಂಬ ಅನುಕೂಲವಾಗಲಿದೆ.
  2. ಸಾಮಾನ್ಯವಾಗಿ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ಹೊರಟು ಬೈಯಪ್ಪನ ಹಳ್ಳಿಗೆ ಹೋಗುವ ರೈಲು ಮೆಜೆಸ್ಟಿಕ್‌ಗೆ ಬರುವಾಗ ತುಂಬಿರುತ್ತದೆ. ಕೆಲವು ಮಂದಿ ರೈಲಿನಿಂದ ಇಳಿದರೂ ಹತ್ತುವವರ ಸಂಖ್ಯೆಗೆ ಹೋಲಿಸಿದರೆ ಇದು ತುಂಬ ಕಡಿಮೆ. ಹೀಗಾಗಿ ಹೆಚ್ಚಿನ ಸಲ ಇನ್ನೊಂದು ರೈಲಿಗೆ ಕಾಯಬೇಕಾಗುತ್ತದೆ.
  3. ಈಗ ಮೆಜೆಸ್ಟಿಕ್‌ನಿಂದ ಪೀಕ್‌ ಅವರ್‌ನಲ್ಲಿ ಹೆಚ್ಚುವರಿ ರೈಲು ಸೇವೆ ಆರಂಭಿಸುವುದರಿಂದ ಮೆಜೆಸ್ಟಿಕ್‌ನಿಂದ ಸೆಂಟ್ರಲ್‌, ಕಾಲೇಜು, ವಿಧಾನಸೌಧ, ಕಬ್ಬನ್‌ ಪಾರ್ಕ್‌ ಮತ್ತು ಎಂ.ಜಿ. ರೋಡ್‌ವರೆಗೆ ಹೋಗುವವರಿಗೆ ಭಾರಿ ಅನುಕೂಲ ಆಗಲಿದೆ.
  4. ಒಂದು ವೇಳೆ ಬೈಯಪ್ಪನಹಳ್ಳಿ ಕಡೆಗೆ ಹೋಗುವವರು ಇದ್ದರೂ ಅವರು ಮೆಜೆಸ್ಟಿಕ್‌ನಿಂದ ಖಾಲಿಯಾಗಿ ಹೊರಡುವ ರೈಲಿನಲ್ಲಿ ಎಂ.ಜಿ. ರೋಡ್‌ ನಿಲ್ದಾಣದವರೆಗೆ ಹೋಗಿ ಅಲ್ಲಿ ಇಳಿದು ಮತ್ತೊಂದು ರೈಲು ಹತ್ತಿ ಮುಂದಕ್ಕೆ ತೆರಳಬಹುದು.

Exit mobile version