Site icon Vistara News

ವರಮಹಾಲಕ್ಷ್ಮೀ ಹಬ್ಬ | ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ

ವರಮಹಾಲಕ್ಷ್ಮೀ ಹಬ್ಬ

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ (ಆ.5) ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಎಲ್ಲೆಡೆ ಸಡಗರ ತುಂಬಿದೆ.

ಎಲ್ಲೆಲ್ಲಿ ಪೂಜೆ?
ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ಪಾರ್ವತಿ ದೇವಿಗೆ ವಿಶೇಷ ಪೂಜೆ ಆಗಲಿದೆ. ಬನಶಂಕರಿ ದೇವಿಗೆ ಲಕ್ಷ್ಮೀಯ ಅಲಂಕಾರ ಹಾಗೂ ಶಾಕಾಂಬರಿ ದೇವಿಗೆ ಡ್ರೈ ಫ್ರೂರ್ಟ್ಸ್ ಅಲಂಕಾರ ಮಾಡಲಾಗಿದೆ. ಮಹಾಲಕ್ಷ್ಮಿ ಮಂದಿರ ವೃತ್ತದ ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ಅಲಂಕಾರ ಆಗಿದ್ದು, ಬೆಳಗ್ಗೆ 10 ಗಂಟೆಯಿಂದ ದೇವಿಗೆ ಪಾದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್‌ ವೀರಾಂಜನೇಯ ದೇವಾಲಯದಲ್ಲಿ ಲಕ್ಷ್ಮೀಗೆ ವಿಶೇಷ ಅಭಿಷೇಕ ಇದ್ದು, 10 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ | Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ

ದೇವಾಲಯಗಳಲ್ಲಿ ಮುತ್ತೈದೆಯರಿಗೆ ಅರಿಶಿನ-ಕುಂಕುಮ ವಿತರಣೆ

ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಮುತ್ತೈದೆಯರಿಗೆ ಅರಿಶಿನ-ಕುಂಕುಮ ಶಾಸ್ತ್ರಗಳು ನಡೆಯಲಿವೆ. ಬನಶಂಕರಿ, ಲಕ್ಷ್ಮೀ ನರಸಿಂಹ ದೇವಾಲಯ, ಮಹಾಲಕ್ಷ್ಮಿ ಲೇಔಟ್‌ನ ಪ್ರಸನ್ನ ವೀರಾಂಜನೇಯ ದೇವಸ್ಥಾನ, ಕಾಡು ಮಲ್ಲಿಕಾರ್ಜುನ ದೇವಾಲಯ ಸೇರಿ ಎಲ್ಲ ಕಡೆ ವಿತರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ಅರಿಶಿಣ-ಕುಂಕುಮ ನೀಡಲು ಸಿದ್ಧತೆ ಆಗುತ್ತಿದೆ.

ಇದನ್ನೂ ಓದಿ | Saree draping | ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ

Exit mobile version