Site icon Vistara News

ಗಂಡನ ಎರಡನೇ ಮದುವೆ; ವಿಚಾರಿಸುತ್ತೇನೆ ಎಂದ ಧರ್ಮಪತ್ನಿ ವೀಣಾ ಕಾಶಪ್ಪನವರ್‌

ವೀಣಾ ಕಾಶಪ್ಪನವರ್‌

ಬಾಗಲಕೋಟೆ: ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ 2ನೇ ಮದುವೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ, ಸಂಪೂರ್ಣ ಮಾಹಿತಿ ಕಲೆ ಹಾಕಿದ ಮೇಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ. ಇದನ್ನು ಸಂಬಂಧಿಸಿದವರನ್ನು ಕೇಳಬೇಕು ಎಂದು ವಿಜಯಾನಂದ ಕಾಶಪ್ಪನವರ್ ಹೆಸರು ಹೇಳದೆ ಧರ್ಮ ಪತ್ನಿ, ರಾಜ್ಯ ಕೆಪಿಸಿಸಿ‌ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್‌ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ವೈಯಕ್ತಿಕ ವಿಚಾರ ಹರಿದಾಡುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ನವನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಗುವೊಂದರ ತಂದೆ ಹೆಸರು ವಿಜಯಾನಂದ ಕಾಶಪ್ಪನವರ್‌ ಎಂದು ಇರುವ ಜನನ ಪ್ರಮಾಣಪತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮಾಧ್ಯಗಳಲ್ಲಿ ತೋರಿಸಿದ ಸರ್ಕಾರಿ ದಾಖಲಾತಿ ಸುಳ್ಳಾಗುತ್ತಾ? ನನಗೆ ಮಾಧ್ಯಮದವರ ಬಗ್ಗೆ ಗೌರವವಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಹಿತಿ ಕಲೆ ಹಾಕಿ ಮುಂದಿನ ದಿನಮಾನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.

ಈ ಹಿಂದೆ ಹುನಗುಂದದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಟಿಯೊಬ್ಬರ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಮಾಜಿ ಶಾಸಕ 2ನೇ ವಿವಾಹವಾಗಿರಬಹುದೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ನಟಿ ಜತೆಗಿನ ಫೋಟೋಗಳ ಜತೆಗೆ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿತ್ತು. ಅದರಲ್ಲಿ ತಂದೆಯ ಹೆಸರಿನ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ತಾಯಿಯ ಹೆಸರು ಪೂಜಾಶ್ರೀ ಎಸ್ ಎಂದು ನಮೂದಾಗಿತ್ತು. ಹೀಗಾಗಿ ಮಾಜಿ ಶಾಸಕ ಎರಡನೇ ಮದುವೆಯಾಗಿದ್ದಾರಾ ಎಂಬ ಅನುಮಾನ ಎಲ್ಲೆಡೆ ಕೇಳಿಬರುತ್ತಿತ್ತು.

ಇದನ್ನೂ ಓದಿ | ಪುರೋಹಿತರು ಎಂದಾದರೂ ಯುದ್ಧ ಮಾಡಿದ್ದಾರಾ?: ಯುದ್ಧಕ್ಕೆ ಪ್ರೇರೇಪಿಸುತ್ತಾರೆ ಎಂದ ಮಲ್ಲಿಕಾ ಘಂಟಿ

Exit mobile version