ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ದಿನನಿತ್ಯ ಬಳಸುವ ಸೊಪ್ಪು-ತರಕಾರಿ ಬೆಲೆ ಗಗನಕ್ಕೇರಿದ್ದು (Vegetable Price Hike) ಜನಸಾಮಾನ್ಯರನ್ನು ಕಂಗೆಡಿಸಿದೆ. ಮದುವೆ ಸೀಸನ್, ಹಬ್ಬಹರಿದಿನಗಳು ಇಲ್ಲದಿದ್ದರೂ ತರಕಾರಿ ಬೆಲೆಗಳು ಮಾತ್ರ ಏರುತ್ತಿವೆ. ಟೊಮ್ಯಾಟೊ ನೂರರ ಗಡಿ ದಾಟಿದ್ದು ಆಗಿದೆ. ವಾರ ಕಳೆದರೂ ಸೊಪ್ಪು- ತರಕಾರಿ ದರಗಳು ಕಡಿಮೆಯಾಗಿಲ್ಲ. ಹೀಗಾಗಿ ರೇಟು ಇಳಿಕೆ ಯಾವಾಗ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ 90% ರಿಂದ 50%ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಏರಿದೆ. ಹೆಚ್ಚು ತರಕಾರಿ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಪ್ರದೇಶಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳು ನೆಲಕಚ್ಚಿವೆ. ಹೂವು, ಹೀಚುಗಾಯಿ ನೆಲಕ್ಕೆ ಬಿದ್ದು ಕೊಳೆಯುವುದಲ್ಲದೆ ನಿರಂತರ ಮಳೆಗೆ ಗಿಡಗಳಲ್ಲೇ ಕೊಳೆಯುತ್ತಿದೆ. ಇದರ ಪರಿಣಾಮ ತರಕಾರಿ ಇಳುವರಿ ಕ್ಷೀಣಿಸಿದೆ. ಇದು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಲು ಕಾರಣವಾಗಿದೆ.
ಸೊಪ್ಪು ತರಕಾರಿ ಖರೀದಿಗೂ ಬಜೆಟ್ ಪ್ಲ್ಯಾನ್
ಸದ್ಯ ಪರಿಸ್ಥಿತಿ ಹೇಗಿದೆ ಎಂದರೆ ಗೃಹಲಕ್ಷ್ಮೀಯರು ಸೊಪ್ಪು ತರಕಾರಿ ಖರೀದಿಗೂ ಬಜೆಟ್ ಪ್ಲ್ಯಾನ್ ಮಾಡುವಂತಾಗಿದೆ. ಸತತ ಮಳೆಯಿಂದಾಗಿ ದರ ಏರಿಕೆ ಆಗಿದ್ದು, ನಗರದ ಕಲಾಸಿಪಾಳ್ಯ ಮಾರ್ಕೆಟ್, ಕೆಆರ್ ಮಾರ್ಕೆಟ್‌ಗಳಲ್ಲೇ ಬೆಲೆಗಳು ತಗ್ಗಿಲ್ಲ. ಇನ್ನು ಮನೆ ಬಾಗಿಲಿಗೆ ಬರುವ ತಳ್ಳೋ ಗಾಡಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ತುಸು ದುಬಾರಿ ಇದೆ.
ಇಂದಿನ ತರಕಾರಿ ಹಾಗೂ ಸೊಪ್ಪಿನ ದರಗಳು ಹೀಗಿವೆ
ತರಕಾರಿ- ಮಾರುಕಟ್ಟೆ ಬೆಲೆ (ಕೆಜಿ)
ಟೊಮ್ಯಾಟೊ – 120 ರೂ.
ಬಾಳೇಕಾಯಿ(ಡಜನ್) – 120 ರೂ.
ಬೀನ್ಸ್ – 90 ರೂ.
ಉದ್ದ ಬದನೆಕಾಯಿ – 50 ರೂ.
ಕ್ಯಾರೆಟ್ – 50 ರೂ.
ಗಡ್ಡೆಕೋಸು – 40 ರೂ.
ಸೌತೇಕಾಯಿ – 30 ರೂ.
ಗುಂಡು ಬದನೇಕಾಯಿ – 35 ರೂ.
ಮೂಲಂಗಿ – 30 ರೂ.
ಬೀಟ್‌ರೂಟ್ – 35 ರೂ.
ಹೀರೇಕಾಯಿ – 30 ರೂ.
ನುಗ್ಗೆಕಾಯಿ – 40 ರೂ.
ಚಪ್ಪರದವರೇಕಾಯಿ – 70 ರೂ.
ಎಲೆಕೋಸು – 20 ರೂ.
ಸೋರೆಕಾಯಿ – 40 ರೂ.
ಇನ್ನು ಕಟ್ಟು ಸೊಪ್ಪಿಗೆ ಕೊತ್ತಂಬರಿ ಸೊಪ್ಪು 15 ರೂ., ಕರಿಬೇವು ಸೊಪ್ಪು 30 ರೂ., ಪುದೀನ 7ರೂ., ಪಾಲಕ್ ಸೊಪ್ಪು 10 ರೂ., ಸಬ್ಬಸಿಗೆ ಸೊಪ್ಪು 20ರೂ. ಹಾಗೂ ದಂಟಿನ ಸೊಪ್ಪು 15 ರೂ, ಮೆಂತ್ಯ ಸೊಪ್ಪು 15 ರೂ. ಇದೆ.
ಇದನ್ನೂ ಓದಿ: Weather Report : ಕರಾವಳಿಗೆ ಆರೆಂಜ್, ಮಲೆನಾಡಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ಹೇಗಿರಲಿದೆ ಮಳೆ ಅಬ್ಬರ
ಹಾಪ್ ಕಾಮ್ಸ್ ದರಗಳು ಹೀಗಿದೆ
ತರಕಾರಿ- ಬೆಲೆ (ಕೆ.ಜಿ)
ಟೊಮ್ಯಾಟೊ – 118 ರೂ.
ಸೌತೇಕಾಯಿ – 36 ರೂ.
ಗುಂಡು ಬದನೇಕಾಯಿ – 49 ರೂ.
ಉದ್ದ ಬದನೆಕಾಯಿ – 49 ರೂ.
ಬಾಳೇಕಾಯಿ – 54 ರೂ.
ಮೂಲಂಗಿ – 33 ರೂ.
ಬೀನ್ಸ್ – 118 ರೂ.
ಗಡ್ಡೆಕೋಸು – 60 ರೂ.
ಊಟಿ ಕ್ಯಾರೆಟ್ – 82 ರೂ.
ಬೀಟ್‌ರೂಟ್ – 54 ರೂ.
ಹೀರೇಕಾಯಿ – 52 ರೂ.
ನುಗ್ಗೆಕಾಯಿ – 64 ರೂ.
ಚಪ್ಪರದವರೇಕಾಯಿ – 82 ರೂ.
ಎಲೆಕೋಸು – 30 ರೂ.
ಸೋರೆಕಾಯಿ – 40 ರೂ.
ಇನ್ನು ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ಸೊಪ್ಪಿನ ದರಗಳು ಹೀಗಿವೆ. ಕೊತ್ತಂಬರಿ ಸೊಪ್ಪು 80 ರೂ., ಕರಿಬೇವು 30 ರೂ., ಪುದೀನ 56 ರೂ., ಪಾಲಕ್ 44 ರೂ. ಹಾಗೂ ಸಬ್ಬಸಿಗೆ ಸೊಪ್ಪು 78 ರೂ., ದಂಟಿನ ಸೊಪ್ಪು 48 ರೂ., ಮೆಂತ್ಯ ಸೊಪ್ಪು 78 ರೂ. ಇದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ