ಕಾರವಾರ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಗುರಿ ಮುಟ್ಟಲು ರೂಪಿಸಿಕೊಂಡಿರುವ “ವಿಜಯ ಸಂಕಲ್ಪ ರಥ ಯಾತ್ರೆ” (Vijay Sankalp Yatre) ಮಾ.18ರಿಂದ 20 ರವರೆಗೆ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಗುರಿಯ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಸಂಘಟನಾತ್ಮಕವಾಗಿ ಹಾಗೂ ಆಡಳಿತಾತ್ಮಕವಾಗಿ ಕಾರ್ಯಚಟುವಟಿಕೆಯನ್ನು ಮಾಡಲಾಗುತ್ತಿದೆ. ಮಾ. 10ರಂದು ಕಾರವಾರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ, ಮಾ. 14ರಂದು ಯಲ್ಲಾಪುರದಲ್ಲಿ ಎಸ್‌ಟಿ ಸಮಾವೇಶ ನಡೆಯಲಿದೆ. ಇದರೊಂದಿಗೆ ವಿಜಯ ಸಂಕಲ್ಪ ಯಾತ್ರೆಯ ಅಡಿಯಲ್ಲಿ ಪಕ್ಷದ ಹಿರಿಯರು ರಾಜ್ಯದ ಮೂಲೆ ಮೂಲೆಯಲ್ಲಿ ಯಾತ್ರೆ ಮಾಡುತ್ತಿದ್ದು, ಜಿಲ್ಲೆಯಲ್ಲೂ ಯಾತ್ರೆಯ ವೇಳಾಪಟ್ಟಿ ನಿಗದಿಯಾಗಿದೆ ಎಂದರು.
ಇದನ್ನೂ ಓದಿ: PM Modi at Ahmedabad : ಕ್ರಿಕೆಟ್ ರಾಜತಾಂತ್ರಿಕತೆ; ಮೊಟೆರಾದಲ್ಲಿ ಮೋದಿ, ಆಂಟೋನಿ ಮಿಂಚು
ಮಾ.18ರಂದು ಸಂಜೆ 6 ಗಂಟೆಗೆ ಹಳಿಯಾಳದಲ್ಲಿ ರೋಡ್ ಶೋ ಮೂಲಕ ಆರಂಭವಾಗಲಿರುವ ಈ ಯಾತ್ರೆಯಲ್ಲಿ ಮಾ.19ರಂದು ಬೆಳಗ್ಗೆ 11 ಗಂಟೆಗೆ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿ, ರೋಡ್ ಶೋ, ಮಧ್ಯಾಹ್ನ 3 ಗಂಟೆಗೆ ಅಂಕೋಲಾದಲ್ಲಿ ರೋಡ್ ಶೋ, ಸಂಜೆ 6 ಗಂಟೆಗೆ ಕುಮಟಾದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಮಾ.20ರಂದು ಬೆಳಗ್ಗೆ ಮುರುಡೇಶ್ವರದಲ್ಲಿ ರೋಡ್ ಶೋ, ಸಂಜೆ 3 ಗಂಟೆಗೆ ಶಿರಸಿಯಲ್ಲಿ ರೋಡ್ ಶೋ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: Actor Govinda : 15ನೇ ವಯಸ್ಸಿನಲ್ಲೇ ಗೋವಿಂದಾರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಸುನಿತಾ!
ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆಯ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ, ಕಾರವಾರ ನಗರ ಬಿಜೆಪಿ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಮುಂತಾದವರಿದ್ದರು.
ಇದನ್ನೂ ಓದಿ: NISAR Satellite: ಅಮೆರಿಕದಿಂದ ಬೆಂಗಳೂರಿಗೆ ಬಂದ ನಿಸಾರ್ ಉಪಗ್ರಹ, ಲಾಂಚ್ ಯಾವಾಗ?