ವಿಜಯನಗರ: ಹೆಸರಾಂತ ಪುರಾತತ್ವಜ್ಞ, ಸಂಶೋಧಕ ಅಮೆರಿಕದ ಜಾನ್ ಮೆರ್ವಿನ್ ಫ್ರಿಟ್ಜ್ (83) ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ಅವರ ಕೊನೇ ಆಸೆಯಂತೆ ಕುಟುಂಬಸ್ಥರು ಫ್ರಿಟ್ಜ್‌ರ ಅಸ್ಥಿಯನ್ನು ಹಂಪಿಯ ತುಂಗಭದ್ರಾ ನದಿಯಲ್ಲಿ (Vijayanagar News) ವಿಸರ್ಜನೆ ಮಾಡಿದ್ದಾರೆ.
1981ರಿಂದ ಪ್ರತಿ ವರ್ಷ ಹಂಪಿಗೆ ಭೇಟಿ ನೀಡುತ್ತಿದ್ದ ಫ್ರಿಟ್ಜ್, ಇತ್ತೀಚೆಗೆ ಲಂಡನ್‌ನಲ್ಲಿ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ತನ್ನ ನಿಧನದ ಬಳಿಕ ಹಂಪಿಯಲ್ಲಿ ಅಸ್ಥಿ ವಿಸರ್ಜನೆ ಮಾಡುವಂತೆ ಹೇಳಿದ್ದರಂತೆ. ಹೀಗಾಗಿ ಫ್ರಿಟ್ಜ್ ಆಸೆಯಂತೆ ಮಗಳು ಆ್ಯಲಿಸ್, ಮೊಮ್ಮಗ ವಿಲಿಯಂ ಹಂಪಿಗೆ ಭೇಟಿ ನೀಡಿ ಹಿಂದು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಸ್ಥಿ ವಿಸರ್ಜನೆ ಮಾಡಿದ್ದಾರೆ.
ಇದನ್ನೂ ಓದಿ: Metro Pillar Collapse: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ದುರ್ಮರಣ ಪ್ರಕರಣ; ಸಿದ್ಧವಾಯ್ತು ಚಾರ್ಜ್‌ಶೀಟ್
ಅಮೆರಿಕದಲ್ಲಿ ಹುಟ್ಟಿದ್ದ ಫ್ರಿಟ್ಜ್ ಕಾರ್ಯಕ್ಷೇತ್ರವೆಲ್ಲ ಲಂಡನ್ ಆಗಿತ್ತು. ಜನವರಿ 23ರಂದು ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದರು. ಹಂಪಿಗೆ ಭೇಟಿ ನೀಡಿದಾಗ ಸಮಗ್ರ ಸಂಶೋಧನೆ ನಡೆಸಿ ಅನೇಕ ಪುಸ್ತಕಗಳನ್ನು ಬರೆದಿದ್ದರು. ಇದರಲ್ಲಿ ಮೊನೊಗ್ರಾಫ್ ಸರಣಿಯೂ ಒಂದಾಗಿದೆ. ಹಂಪಿ ಜತೆಗೆ ವಿಶೇಷ ಒಡನಾಟವನ್ನು ಅವರು ಹೊಂದಿದ್ದರು. ಇದೇ ವೇಳೆ ಹಿಂದು ಧಾರ್ಮಿಕ ಪದ್ಧತಿಗಳ ಬಗ್ಗೆಯೂ ವಿಶೇಷ ಒಲವನ್ನು ಹೊಂದಿದ್ದರು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ