Site icon Vistara News

Vijayanagara News : ಮೃತ ಕಾನ್ಸ್‌ಟೇಬಲ್ ಕುಟುಂಬಕ್ಕೆ 30 ಲಕ್ಷ ರೂ. ವಿಮೆ ಪರಿಹಾರ

Check distribution to the family of the deceased police constable at vijayanagara

ವಿಜಯನಗರ: ಕಳೆದ ಫೆಬ್ರುವರಿ 4ರಂದು ದಾವಣಗೆರೆ ಜಿಲ್ಲೆ ಜಗಳೂರು ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ (Road accident) ಮೃತಪಟ್ಟಿದ್ದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಶಬ್ಬೀರ್ ಹುಸೇನ್ ಅವರ ಕುಟುಂಬಕ್ಕೆ ಭಾರತೀಯ ಸ್ಟೇಟ್ ಬ್ಯಾಂಕಿನ (SBI) ಪೊಲೀಸ್ ವೇತನ ಪ್ಯಾಕೇಜ್ ವಿಮಾ ಪರಿಹಾರ ಯೋಜನೆಯಡಿ 30 ಲಕ್ಷ ರೂ.ಗಳ ಪರಿಹಾರ ಚೆಕ್ ನೀಡಲಾಯಿತು.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್‌ಪಿ ಬಿ.ಎಲ್.ಶ್ರೀಹರಿಬಾಬು, ಮೃತ ಶಬ್ಬೀರ್ ಹುಸೇನ್ ಅವರ ಪತ್ನಿ ರಜಿಯಾಬೇಗಂ ಅವರಿಗೆ ಚೆಕ್ ಹಸ್ತಾಂತರಿಸಿದರು.

ಇದನ್ನೂ ಓದಿ: Monsoon culture: ಮಳೆಯ ಜತೆಗುಂಟು ಸಂಸ್ಕೃತಿಯ ನಂಟು; ಆಚರಣೆ, ಕತೆ, ಹಾಡು ನೂರೆಂಟು

ಎಸ್‌ಬಿಐ ಸ್ಯಾಲರಿ ಪ್ಯಾಕೇಜ್ ಖಾತೆ ಹೊಂದಿದವರಿಗೆ ನೀಡುವ ವಿಮಾ ಮೊತ್ತದ ಪರಿಹಾರ ಇದಾಗಿದೆ.

ಈ ಸಂದರ್ಭದಲ್ಲಿ ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಗೋಯೆಲ್, ಶಾಖಾ ವ್ಯವಸ್ಥಾಪಕ ಸೈಯದ್ ಎಸ್. ಕೆ ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version