Site icon Vistara News

Vijayanagara News: ಅರಸೀಕೆರೆ ದಂಡಿ ದುರುಗಮ್ಮ ಜಾತ್ರೆ: ಶಾಂತಿ ಸಭೆ

Araseikere Dandi Durugamma jatra Peace meeting

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ (Arasikere Village) ಜ.5 ರಿಂದ ಮೂರು ದಿನಗಳ ಕಾಲ ಜರುಗುವ ದಂಡಿ ದುರುಗಮ್ಮನ ಜಾತ್ರೆಯ ಅಂಗವಾಗಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶಾಂತಿ ಸಭೆ ನಡೆಯಿತು.

ಇಲ್ಲಿಯ ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ್ ಕಮ್ಮಾರ್ ಮಾತನಾಡಿ, ಜ. 5 ರಿಂದ ಮೂರು ದಿನಗಳ ಕಾಲ ನಡೆಯುವ ದಂಡಿ ದುರುಗಮ್ಮ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಂಚಾಯಿತಿ ಹಾಗೂ ಕಮಿಟಿ ವತಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ತುರ್ತು ಸೇವೆಗೆ 112 ವಾಹನಕ್ಕೆ ಕರೆ ಮಾಡಿ ಎಂದ ಅವರು, ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗುವುದು. ಈ ವರ್ಷ ಬರಗಾಲ ಹಾಗೂ ಕೋವಿಡ್ ಇರುವುದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Book release : ಜ.5 ಕ್ಕೆ ಗೀತ ಪ್ರೀತಿ ಗ್ರಂಥ ಲೋಕಾರ್ಪಣೆ

ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ ಮಾತನಾಡಿ, ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ವಕೀಲ ಡಾ.ಎಂ.ಸುರೇಶ್ ಮಾತನಾಡಿ, ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಶೌಚಾಲಯ ವ್ಯವಸ್ಥೆಯಿರುವುದಿಲ್ಲ, ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಶೌಚಾಲಯ ವ್ಯವಸ್ಥೆ ಮಾಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಕಮಿಟಿ ಸದಸ್ಯ ಪೂಜಾರ್ ಮರಿಯಪ್ಪ ಮಾತನಾಡಿ, ಪ್ರತಿವರ್ಷದಂತೆ 3 ದಿನಗಳ ಕಾಲ ಶಾಂತಿಯುತವಾಗಿ ಜಾತ್ರೆ ನಡೆಸಲಾಗುವುದು ಎಂದು ಹೇಳಿದರು.

ಪಿಎಸ್ಐ. ರಂಗಯ್ಯ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು, ದೇವಸ್ಥಾನದ ಸುತ್ತ ಜನ ದಟ್ಟಣೆಯಾಗುವುದರಿಂದ ಸಿಸಿ ಕ್ಯಾಮರಾ ಅಳವಡಿಸುವುದು ಅತ್ಯವಶ್ಯಕ ಎಂದು ಹೇಳಿದರು.

ಇದನ್ನೂ ಓದಿ: Winter Shawl Styling: ಚಳಿಗಾಲದಲ್ಲಿ ಶಾಲನ್ನು ಹೀಗೆ ಸ್ಟೈಲಿಂಗ್‌ ಮಾಡಿ ನೋಡಿ!

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಪಿಎಸ್ಐ. ರಂಗಯ್ಯ, ಜಾತಪ್ಪ, ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ್, ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಡ್ಡಿ ಚನ್ನವೀರಪ್ಪ, ಅದಾಮ್ ಸಾಹೇಬ್, ಮುತ್ತಿಗಿ ಹನುಮಂತಪ್ಪ, ಕೆ.ಮಹಾಂತೇಶ್, ಎಂ.ಚಂದ್ರಪ್ಪ, ಮುಖಂಡರಾದ ಐ. ಸಲಾಂ ಸಾಹೇಬ್, ಹಾಲೇಶ್, ವೆಂಕಟೇಶ್, ಕೆ. ಡಿ. ಅಂಜಿನಪ್ಪ, ಲಕ್ಷ್ಮಣ್, ಷಣ್ಮುಖಪ್ಪ, ನವೀನ್ ಹಾಗೂ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version