ವಿಜಯನಗರ: ತುಂಗಭದ್ರಾ ಜಲಾನಯನ ಪ್ರದೇಶದ ಹೊಲವೊಂದರಲ್ಲಿ ಬೃಹದಾಕಾರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಬಳಿ ಭತ್ತದ ಗದ್ದೆಯಲ್ಲಿ ಮೊಸಳೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ. ಸುಮಾರು 9 ಅಡಿ ಉದ್ದದ ಬೃಹದಾಕಾರದ ಮೊಸಳೆ ಕಂಡು ರೈತರು ಗಾಬರಿಗೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರದಿಂದ ಮೊಸಳೆಯನ್ನು ಸೆರೆಹಿಡಿಯಲಾಗಿದೆ. ಹರಸಾಹಸ ಪಟ್ಟು ಮೊಸಳೆ ಸೆರೆಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: Leopard trapped : ಮೈಸೂರು ಜಿಲ್ಲೆಯಲ್ಲಿ ನಾಲ್ಕು ವರ್ಷದಲ್ಲಿ 64 ಚಿರತೆ ಸೆರೆ! ಬೋನಿಗೆ ಬಿದ್ದವುಗಳನ್ನು ಏನ್ಮಾಡ್ತಾರೆ?