Site icon Vistara News

Vijayanagara News: ನಿಚ್ಚವ್ವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

Cluster Level Pratibha karanji Program at Nichhavvanahalli Government School in harapanahalli

ಹರಪನಹಳ್ಳಿ: ತಾಲೂಕಿನ ನಿಚ್ಚವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಡಬಗೆರೆ ಕ್ಲಸ್ಟರ್ ಮಟ್ಟದ (Cluster Level) ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು (Pratibha karanji Program) ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.

ಪಠ್ಯ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳು ಸಂತೋಷದಿಂದ ಶಾಲೆಗೆ ಬರುತ್ತಾರೆ, ಓದುತ್ತಾರೆ, ಹೊಸ ಹೊಸ ವಿಷಯಗಳನ್ನು ಕಲಿಯುತ್ತಾರೆ ಎಂಬ ಉದ್ದೇಶದಿಂದ ಇಲಾಖೆಯು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: India GDP Growth: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್-ಜೂನ್‌ನಲ್ಲಿ ಶೇ.7.8 ಜಿಡಿಪಿ ದಾಖಲಿಸಿದ ಭಾರತ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯುವ ಮುಖಂಡ ವೈ.ಡಿ.ಅಣ್ಣಪ್ಪ ಮಾತನಾಡಿದರು.

ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪ ಮಾತನಾಡಿ, ಕೋಲಾಟ, ನೃತ್ಯ, ಜನಪದ ಗೀತೆಗಳು ಸೇರಿದಂತೆ ಇನ್ನೂ ಮುಂತಾದ ನಮ್ಮ ದೇಶೀಯ ಕಲೆಗಳನ್ನು ಉಳಿಸುವ ಸಲುವಾಗಿ ಹಾಗೂ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಗುರುತಿಸುವುದೇ ಈ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಎಂದು ಹೇಳಿದರು.

ಇದೇ ವೇಳೆ ಪಿಡಿಒ ಅಂಜಿನಪ್ಪ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಊಟದ ತಟ್ಟೆಗಳನ್ನು ವಿತರಿಸಿದರು. ಶಾಸಕಿ ಎಂ. ಪಿ. ಲತಾ ಅಭಿಮಾನಿ ಬಳಗದ ರಾಜಪ್ಪ ಮತ್ತು ಮಲ್ಲೇಶ್ ಅವರು ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಾಗೂ ಪೆನ್‌ಗಳನ್ನು ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರಯ್ಯ ಅಧ್ಯಕ್ಷತೆ ವಹಿಸಿದ್ದರು,

ಇದನ್ನೂ ಓದಿ: Nutrition Week 2023: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ! ಪೌಷ್ಟಿಕತೆ ಹೆಚ್ಚಿಸುವ ಉದ್ದೇಶ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಆನಂದಪ್ಪ, ಮುಖಂಡರಾದ ಪ್ರಶಾಂತ್ ಪಾಟೀಲ್, ನಿಚ್ಚವ್ವನಹಳ್ಳಿ ಪರುಶುರಾಮಪ್ಪ, ಭೀಮಪ್ಪ, ಕೆಂಚಪ್ಪ, ಸಿಆರ್‌ಪಿ ಅಬ್ದುಲ್ ಸಲಾಂ, ಶ್ರೀಕಾಂತ್, ಪದ್ಮಾಲತಾ, ರಾಮಪ್ಪ, ಬಂದಮ್ಮ, ಸಿದ್ದಣ್ಣ, ಅಂಜಿನಪ್ಪ, ಕಲಿವೀರ್ ಕಳ್ಳಿಮನಿ, ಜಯ್ಯಪ್ಪ, ಪಿಡಿಒ ಮುಕ್ತಾರಲಿ, ಮುಖ್ಯಗುರು ಎ.ಎಚ್. ಕೊಟ್ರೇಶ್, ಸಹ ಶಿಕ್ಷಕರಾದ ಬಿ.ಜಕಣಾಚಾರಿ, ಕೆ.ರತ್ನಮ್ಮ, ಜಿ.ಬಸವರಾಜ್, ಕೆ.ಮೌನೇಶ್ ಚಾರಿ, ಕೆ. ಎಸ್.ಕುಮಾರಸ್ವಾಮಿ, ಎಲ್ಲಾ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ಇತರರು ಇದ್ದರು.

Exit mobile version