ಹರಪನಹಳ್ಳಿ: ಶಿಸ್ತು (Discipline), ಸಮಯ ಪ್ರಜ್ಞೆ, ತಾಳ್ಮೆ (Patience), ನಿರಂತರ ಪರಿಶ್ರಮದಿಂದ ವಿದ್ಯಾರ್ಥಿಗಳು (Students) ಸಾಧನೆ (Achivement) ಮಾಡಬೇಕು ಎಂದು ಕೊಟ್ಟೂರಿನ ಇಂದು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಂ.ವಾಗೀಶಯ್ಯ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಎಸ್.ಎಂ.ಸಿ.ಕೆ. ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿ ಸಂಘ ಉದ್ಘಾಟನೆ, ನಿವೃತ್ತ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾಲೇಜು ಪ್ರಾರಂಭವಾಗಿ 35 ವರ್ಷಗಳಾಗಿವೆ, ನಾನು ಸಹ ಈ ಕಾಲೇಜಿನಲ್ಲಿ ಓದಿದ್ದೇನೆ,ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Weather report : ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಂದೂ ಸೇರಿ ಇನ್ನು 6 ದಿನ ಮಳೆಯಾರ್ಭಟ!
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ವಿ ಹಾಗೂ ಉನ್ನತ ಹುದ್ದೆ ಪಡೆಯಬೇಕಾದರೆ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಸೋಮಶೇಖರ್ ಕಿಚಿಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್.ಎಂ. ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Gold Rate Today: ಚಿನ್ನದ ದರದಲ್ಲಿ ಗಣನೀಯ ಇಳಿಕೆ, ಇಂದು ಕೊಂಡರೆ ಬೆಲೆ ಹೀಗಿದೆ
ಕಾರ್ಯಕ್ರಮದಲ್ಲಿ ಜಿ.ಬಿ.ಹಾವೇರಿ, ಪಿ.ಎ.ದೇಸ್ಕರ್, ಆರ್.ಡಿ ಕೊಪ್ಪದ್, ಈಶಪ್ಪ, ಎ. ಪಿ. ನದಾಫ್, ಮಂಜಪ್ಪ, ರಾಮಚಂದ್ರಪ್ಪ, ಟಿ. ಹಾಲೇಶ್, ಚಳಗೇರಿ, ಮುಖ್ಯಗುರು ಶಾಂತ ಕುಮಾರಿ, ವಿದ್ಯಾಶ್ರೀ, ಪ್ರಾಂಶುಪಾಲ ಕುಮಾರ್ ನಾಯ್ಕ್, ಉಪನ್ಯಾಸಕರಾದ ಪಿ. ದುರುಗೇಶ್, ಬಸವರಾಜ್, ವಿನಾಯಕ, ನಾಗರಾಜ್, ಬಿ.ಕೆ.ಚಂದ್ರಪ್ಪ, ರವಿಕುಮಾರ್, ಡಿ. ಚಂದ್ರಪ್ಪ, ಚೇತನ, ವಸಂತಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.