ವಿಜಯನಗರ: ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮುಖ್ಯ ಗ್ರಂಥಾಲಯ ಅಧಿಕಾರಿಯಾದ ಡಾ.ಭೋಜರಾಜು ಗುಂಜಾಳ ಅವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ 2023ನೇ ಸಾಲಿನ ‘ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಗಿದೆ
ಬೆಂಗಳೂರಿನ ಹಂಪಿನಗರದಲ್ಲಿ ಭಾರತ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 131ನೇ ಜನ್ಮ ದಿನಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ (National Librarians Day) ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಗುಂಜಾಳ ಅವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದವರಾಗಿದ್ದು, ದಾವಣಗೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಧಾರವಾಡದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಮೈಸೂರ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಲೈಬ್ರರಿ ಮ್ಯಾನೇಜ್‌ಮೆಂಟ್, ನಾಲೆಡ್ಜ್ ಮ್ಯಾನೇಜ್‌ಮೆಂಟ್ (ಕೆಎಂ), ಎಂಟರ್‌ಪ್ರೈಸ್ ಕಂಟೆಂಟ್ ಮ್ಯಾನೇಜ್‌ಮೆಂಟ್ (ಇಸಿಎಂ) ಮತ್ತು ಶೈಕ್ಷಣಿಕ ಮತ್ತು ಐಟಿ ವಲಯಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ (ಪಿಎಂ)ನಲ್ಲಿ 23 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಹೆಣ್ಣನ್ನು ಅಗೌರವಿಸುವ ಪದಗಳಿಗೆ ನಿರ್ಬಂಧ ಸೂಕ್ತ
ಒಡಿಶಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕೆಲಾದಲ್ಲಿ ಉಪಗ್ರಂಥಪಾಲಕರಾಗಿ ಹಾಗೂ ಪಂಜಾಬ್‌ನ ಪಟಿಯಾಲದ ಥಾರ್ಪ ವಿಶ್ವವಿದ್ಯಾಲಯದಲ್ಲಿ ಉಪಗ್ರಂಥಪಾಲಕರಾಗಿ ಮತ್ತು ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಜ್ಞಾನ ನಿರ್ವಹಣೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಡಾ.ಭೋಜರಾಜು ಅವರು ಪ್ರಸ್ತುತ ಹೈದರಾಬಾದನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯ ಗ್ರಂಥಾಲಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.