ಹಂಪಿ : ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರ ಹಂಪಿಯಲ್ಲಿ (Hampi News) ವಿರೂಪಾಕ್ಷೇಶ್ವರ ದೇವರ ಅದ್ಧೂರಿ ಬ್ರಹ್ಮ ರಥೋತ್ಸವ ಗುರುವಾರ ಜರುಗಿತು. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕಳೆಗುಂದಿದ್ದ ಜಾತ್ರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗಿದೆ.
ಇದನ್ನೂ ಓದಿ: Hosapete Railway station : ಹೊಸಪೇಟೆಯಲ್ಲಿ ನಿಂತೇ ಈಗ ಹಂಪಿಯನ್ನೂ ನೋಡ್ಬೋದು, ಹೇಗಂತೀರಾ?
ಹಂಪಿಯ ಜಾತ್ರೆಗೆ ಹೊಸಪೇಟೆ ಮಾತ್ರವಲ್ಲದೆ ಅಕ್ಕ ಪಕ್ಕದ ಜಿಲ್ಲೆಗಳು, ಹೊರ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಜನರು ಬಂದು ಸೇರಿದ್ದರು. ಜಾತ್ರೆಯಲ್ಲಿ ಜೋಡಿ ರಥಗಳನ್ನು ಎಳೆಯಲಾಗಿದೆ. ಮೊದಲನೆಯ ರಥ ನೂರಾರು ಅಡಿಗೂ ಎತ್ತರವಾಗಿದ್ದು ಐದು ಕ್ವಿಂಟಾಲ್‌ಗೂ ಹೆಚ್ಚು ತೂಕವಿತ್ತು. ಅದನ್ನು ಲಕ್ಷಾಂತರ ಭಕ್ತರು ಎಳೆದು ಪುನೀತರಾದರು. ಅದಾದ ನಂತರ ಇನ್ನೊಂದು ಸಣ್ಣ ರಥವನ್ನು ಎಳೆಯಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು.
ಇದನ್ನೂ ಓದಿ: Leopard Attack: ಹೊನ್ನಾವರದಲ್ಲಿ ಚಿರತೆ ದಾಳಿಗೆ ಜಾನುವಾರು ಬಲಿ; ಹಂಪಿ ಪವರ್ ಹೌಸ್‌ನಲ್ಲಿ ಚಿರತೆ ಪ್ರತ್ಯಕ್ಷ
ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತೆ ಪಾರ್ವತಿ ಅವರು ಮಾತನಾಡಿದ್ದು, “ಹಂಪಿಯ ವಿರೂಪಾಕ್ಷೇಶ್ವನ ಜಾತ್ರೆಯಲ್ಲಿ ಇಷ್ಟೊಂದು ಜನರನ್ನು ನೋಡಿ ತುಂಬ ಸಂತಸವಾಗುತ್ತಿದೆ. ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಈ ಜಾತ್ರೆಗೆ ಬರುತ್ತಿದ್ದೇವೆ. ಈ ಬಾರಿಯ ಅದ್ದೂರಿ ರಥೋತ್ಸವದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ” ಎಂದು ಹೇಳಿದ್ದಾರೆ.