Site icon Vistara News

Hampi Utsav 2024: ಸಂಶೋಧನೆ ಮೂಲಕ ಯುವಪೀಳಿಗೆಗೆ ಇತಿಹಾಸ, ಪರಂಪರೆ ತಿಳಿಸಿ: ಡಿಸಿ ದಿವಾಕರ್‌

Viajayanagara DC M.S. Diwakar Spoke in 26th Annual Seminar Programme about Vijayanagara Studies

ಹೊಸಪೇಟೆ (ವಿಜಯನಗರ): ಸಂಶೋಧನೆ (Research) ಮೂಲಕ ಯುವ ಪೀಳಿಗೆಗೆ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದು (Hampi Utsav 2024) ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ತಿಳಿಸಿದರು.

ಹಂಪಿ ಉತ್ಸವ-2024ರ ಅಂಗವಾಗಿ ಜಿಲ್ಲೆಯ ಕಮಲಾಪುರ-ಹಂಪಿಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಕಮಲಾಪುರ-ಹಂಪಿಯ ಕಮಲ್ ಮಹಲ್ ಹತ್ತಿರದ ಪುರಾತತ್ವ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಶನಿವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ “ವಿಜಯನಗರ ಅಧ್ಯಯನ ಕುರಿತು 26ನೇ ವಾರ್ಷಿಕ ವಿಚಾರ ಸಂಕಿರಣ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ:Hampi Utsav 2024: ಹಂಪಿ ಉತ್ಸವದಲ್ಲಿ ಪ್ರೇಕ್ಷಕರ ಮನಗೆದ್ದ ಬಯಲು ಕುಸ್ತಿ ಸ್ಪರ್ಧೆ

ವಿಜಯನಗರವು ಇಂದು ತನ್ನ ಗತವೈಭವವವನ್ನು ಮರಳಿ ಪಡೆದಂತಹ ಅನುಭವವನ್ನು ಹಂಪಿ ಉತ್ಸವದಲ್ಲಿ ನಾವಿಂದು ಕಾಣುತ್ತಿದ್ದೇವೆ. ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಂಶೋಧನೆಗಳು ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ವಿಜಯನಗರ ಅಧ್ಯಯನ ಕುರಿತಾದ ವಾರ್ಷಿಕ ವಿಚಾರ ಸಂಕಿರಣ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ ಶ್ರೀನಿವಾಸ ವಿ.ಪಾಡಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: IND vs ENG 2nd Test: 6 ವಿಕೆಟ್ ಕೆಡವಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್ ತಳಕೇರಿ, ಕಮಲಾಪುರ-ಹಂಪಿಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕ ಡಾ. ಆರ್.ಶೇಜೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version