Site icon Vistara News

Rain News | ವಿಜಯನಗರ ಜಿಲ್ಲೆಯಲ್ಲಿ ಮಳೆಯ ಅಬ್ಬರ: ನಾನಾ ಕಡೆ ಮನೆಗಳು ಭಾಗಶಃ ಜಖಂ

Rain News

ವಿಜಯನಗರ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾದ (Rain News) ಹಿನ್ನೆಲೆಯಲ್ಲಿ ನಾನಾ ಕಡೆ ಮನೆಗಳು ಭಾಗಶಃ ಜಖಂಗೊಂಡಿದೆ. ಸೆಪ್ಟಂಬರ್ 1 ರಿಂದ 9ರವರೆಗೆ ಸುರಿದ ಭಾರಿ ಮಳೆಯಿಂದ ಹಲವು ಮನೆಗಳು ಹಾನಿಗೊಂಡಿವೆ. ಹಾಗೂ ಕೃಷಿ ಬೆಳೆಗಳು ನಾಶಗೊಂಡಿವೆ.

ಹೊಸಪೇಟೆ ತಾಲೂಕಿನಲ್ಲಿ ಒಟ್ಟು 16 ಮನೆಗಳು, ಹೂವಿನ ಹಡಗಲಿ 130 ಮನೆಗಳು, ಕೊಟ್ಟೂರು 14 ಮನೆಗಳು, ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 35 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಹೂವಿನ ಹಡಗಲಿಯಲ್ಲಿ ಒಂದು ಮನೆ ಸಂಪೂರ್ಣ ಹಾನಿಯಾಗಿದೆ.

ವಿಜಯನಗರ ಜಿಲ್ಲೆಯಲ್ಲಿ 900 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಹಾಗೂ 25 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ವಿಜಯನಗರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದನ್ನೂ ಓದಿ | Rain News| ಮಳೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ, ಮುನ್ನೆಚ್ಚರಿಕೆ ವಹಿಸಲು ಆಸ್ಪತ್ರೆಗಳಿಗೆ ಸೂಚನೆ

Exit mobile version