Site icon Vistara News

ವಿಜಯನಗರದ ಐತಿಹಾಸಿಕ ತಾಣಗಳಿಗೆ ದೀಪಾಲಂಕಾರ

tb dam

ವಿಜಯನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಜಯನಗರದ ಐತಿಹಾಸಿಕ ತಾಣಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಅತ್ತ ಹಂಪಿಯಲ್ಲಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದರೆ, ಇತ್ತ ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ದೀಪಾಲಂಕಾರ ಮಾಡಲಾಗಿದೆ.

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 33 ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ 33 ಕ್ರೆಸ್ಟ್ ಗೇಟ್‌ಗಳಿಗೂ ದೀಪಾಲಂಕಾರ ಮಾಡಲಾಗಿದ್ದು, ಅಣೆಕಟ್ಟು ವೈಭವದಿಂದ ಕಂಗೊಳಿಸುತ್ತಿದೆ. ತ್ರಿವರ್ಣದ ದೀಪಗಳಿಂದ ಅಲಂಕೃತವಾಗಿರುವ ಅಣೆಕಟ್ಟು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Exit mobile version