ಹರಪನಹಳ್ಳಿ: ಏಳನೇ ವೇತನ ಆಯೋಗ (Seventh Pay Commission) ಜಾರಿ ಮತ್ತು ಎನ್‌ಪಿಎಸ್ (NPS) ರದ್ದತಿಗೆ ಆಗ್ರಹಿಸಿ, ಹರಪನಹಳ್ಳಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಪ್ರಭಾರಿ ಅಧ್ಯಕ್ಷ ಎನ್.ಜಿ.ಮನೋಹರ್ ಅವರ ನೇತೃತ್ವದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ, ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ಎಂ. ಪಿ.ಲತಾ ಮಲ್ಲಿಕಾರ್ಜುನ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸರ್ಕಾರಿ ನೌಕರರ ಏಳನೇ ವೇತನ ಆಯೋಗ ಜಾರಿಯ ಬಗ್ಗೆ ಮತ್ತು ಎನ್‌ಪಿಎಸ್ ರದ್ಧತಿಯ ಬಗ್ಗೆ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Elephant Attack : ಕಾಫಿ ಗಿಡದ ಮರೆಯಲ್ಲಿ ನಿಂತು ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಒಂಟಿಸಲಗ
ಈ ಸಂದರ್ಭದಲ್ಲಿ ನೌಕರರ ಸಂಘದ ನಿರ್ದೇಶಕ ಸೂರ್ಯ ನಾಯ್ಕ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ ಬಿ., ಕಾರ್ಯದರ್ಶಿ ಲತಾ ರಾಟೋಡ್ ಮತ್ತು ಪದಾಧಿಕಾರಿಗಳು ಹಾಗೂ ಎನ್‌ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷ ವೀರೇಶ್, ದೈಹಿಕ ಶಿಕ್ಷಕರ ಸಂಘ, ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಲತಾ ಟಿ.ಎಚ್.ಎಂ., ನಿವೃತ್ತ ನೌಕರರ ಅಧ್ಯಕ್ಷ ಶೇಖರ್ ಗೌಡ ಪಾಟೇಲ್, ಭೀಮಪ್ಪ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.