ವಿಜಯನಗರ: ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರಾ ಲೋಕೇಶ್ (Pavithra Lokesh) ಸೇರಿ 295 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿವಿಯಲ್ಲಿ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ನಿಕಾಯಗಳಡಿ ಸಂಶೋಧನೆಗೆ ಆಸಕ್ತಿ ತೋರಿ 981 ಸಾಮಾನ್ಯರು ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು 295 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ ಮಾಹಿತಿ ನೀಡಿದ್ದಾರೆ.
ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ. ನಟಿ ಪವಿತ್ರಾ ಲೋಕೇಶ್ ಅವರು ಭಾಷಾ ನಿಕಾಯದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ 30 ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ: Pavithra Naresh: ಪವಿತ್ರಾ-ನರೇಶ್‌ಗೆ ಗೆಲುವು; ನಟನ ʼಪತ್ನಿʼಗೆ ಹಿನ್ನಡೆ!
ಪವಿತ್ರಾ-ನರೇಶ್‌ಗೆ ಗೆಲುವು;
ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ (Pavithra Naresh) ಅಭಿನಯದ `ಮತ್ತೆ ಮದುವೆ’ ಸಿನಿಮಾ ಒಟಿಟಿ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ದಿಢೀರ್ ನಾಪತ್ತೆಯಾಗಿತ್ತು. ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆಯಷ್ಟೇ ವಜಾ ಮಾಡಿದೆ.
ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ʻಮಳ್ಳಿಪೆಳ್ಳಿʼ ಎಂಬ ಟೈಟಲ್‌ನಡಿ ಮೇ 26ರಂದು ಬಿಡುಗಡೆಯಾಗಿತ್ತು. ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಸಿನಿಮಾ ಮಾಡಿದ್ದಾರೆ. ಅದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.