ಹರಪನಹಳ್ಳಿ: ಕಲಬುರ್ಗಿಯಲ್ಲಿ ಈಚೆಗೆ ನಡೆದ ವಕೀಲ ಈರಣ್ಣಗೌಡ ಪಾಟೀಲ್ ಅವರ ಹತ್ಯೆ ಹಾಗೂ ಚಿಕ್ಕಮಗಳೂರಿನ ವಕೀಲನ ಮೇಲೆ ಪೊಲೀಸರ ಹಲ್ಲೆ ಖಂಡಿಸಿ, ಹರಪನಹಳ್ಳಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ (Protest) ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಣ್ಣ ಮಾತನಾಡಿ, ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರಿನ ಕಿರಿಯ ವಕೀಲನ ಮೇಲಿನ ಪೊಲೀಸರಿಂದ ಜರುಗಿದ ಹಲ್ಲೆ ಖಂಡನೀಯ. ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Belagavi Winter Session: ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ; ಏರಲಿದೆಯೇ ದರ?
ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಜಗದಪ್ಪ ಮಾತನಾಡಿ, ಈಚೆಗೆ ವಕೀಲರ ಮೇಲೆ ಹಲ್ಲೆ ಮತ್ತು ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿ ನೆಡೆಯುತ್ತಿವೆ ಈ ಕುರಿತಂತೆ ಸರ್ಕಾರ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Garlic Price: ಕೆಲವೇ ದಿನಗಳಲ್ಲಿ ದುಪ್ಪಟ್ಟಾದ ಬೆಳ್ಳುಳ್ಳಿ ಬೆಲೆ, ಈಗ ಮಸಾಲೆ ಇನ್ನಷ್ಟು ಖಾರ
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ ಗೌಡ, ಕಾರ್ಯದರ್ಶಿ ಕೆ. ಆನಂದ, ಜಂಟಿ ಕಾರ್ಯದರ್ಶಿ ಹೂಲೆಪ್ಪ, ಖಜಾಂಚಿ ರೇಣುಕಾ ಎಫ್. ಮೇಟಿ, ಕಾರ್ಯಕಾರಿ ಸಮಿತಿಯ ಕೇಶವ ಮೂರ್ತಿ, ಕರಿಯಪ್ಪ, ಮಲ್ಲಮ್ಮ ಬಡಿಗೇರ್, ರಾಜಪ್ಪ, ಮಾರುತಿ ಹಾಗೂ ವಕೀಲರು ಪಾಲ್ಗೊಂಡಿದ್ದರು.